ಸಾರ್ವಜನಿಕರಿಂದ ಲಾಂಛನದ(ಲೋಗೋ) ಮಾದರಿಗಳ ಆಹ್ವಾನ
ತುಮಕೂರು(ಕ.ವಾ.)ಸೆ.೨೨: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ‘ಕರ್ನಾಟಕ ಸಂಭ್ರಮ ೫೦’ ಹಾಗೂ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿದ್ಯಮಯ, ವರ್ಣರಂಜಿತ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉದ್ದೇಶಿಸಿದೆ.
ಈ ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲು ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನದ(ಲೋಗೋ) ಮಾದರಿಗಳನ್ನು ಸಾರ್ವಜನಿಕರಿಂದ ಆನ್-ಲೈನ್ ಮುಖೇನ ಆಹ್ವಾನಿಸಲಾಗಿದೆ.
ಇದರಲ್ಲಿ ಆಯ್ಕೆಯಾಗುವ ಲಾಂಛನಕ್ಕೆ ರೂ.೨೫,೦೦೦/-ಗಳ ಬಹುಮಾನವನ್ನು ನಿಗಧಿಪಡಿಸಲಾಗಿದೆ. ಈ ಲಾಂಛನದ (ಲೋಗೋ) ಮಾದರಿಯನ್ನು ಕಳುಹಿಸಲು ಸೆಪ್ಟೆಂಬರ್ ೩೦, ೨೦೨೩ ಕಡೆಯ ದಿನವಾಗಿದೆ.
ಆಸಕ್ತರು ಈ ಕುರಿತು ಅಗತ್ಯ ಮಾಹಿತಿಗಳನ್ನು ಪಡೆಯಲು ಹಾಗೂ ಲಾಂಛನದ (ಲೋಗೋ) ಮಾದರಿಯನ್ನು ಕಳುಹಿಸಲು ಇಲಾಖೆಯ ಜಾಲತಾಣ https://www.kannadasiri.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು
ಲಾಂಛನದ(ಲೋಗೋ) ಮಾದರಿಗಳನ್ನು ಸಾರ್ವಜನಿಕರಿಂದ ಆನ್-ಲೈನ್ ಮುಖೇನ ಆಹ್ವಾನಿಸಲಾಗಿದೆ.

Leave a comment
Leave a comment