ಅಂತರಜಾಲದಲ್ಲಿ ಮಹಿಳಾ ಕೇಂದ್ರಿತ ಜ್ಞಾನ ವಿಸ್ತಾರವಾಗಲಿ’
ತುಮಕೂರು: ಅಂತರಜಾಲದಲ್ಲಿ ಮಹಿಳಾ ಕೇಂದ್ರಿತ ಕುರಿತಾದ ತಾಂತ್ರಿಕ ಜ್ಞಾನ ಹೆಚ್ಚು ಲಭ್ಯವಾಗುವಂತೆ ಮಾಡುವ ಅವಶ್ಯಕತೆಯಿದೆ ಎಂದು ಕನ್ನಡದ ಮೊದಲ ಅಂತರಜಾಲ ಪತ್ರಿಕೆಯ ಸಂಪಾದಕ ಡಾ. ಯು. ಬಿ. ಪವನಜ ತಿಳಿಸಿದರು.
ತುಮಕೂರು ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿಕಿಮೀಡಿಯಾ ಫೌಂಡೇಶನ್ ಹಾಗೂ ವಿಕಿವಿಮೆನ್ಸ್ ಮಂಗಳೂರು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ‘ವಿಕಿಪೀಡಿಯಾ ಭಾಷಾಂತರ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.
ಅನುಪಾತದಲ್ಲಿ ಒಂಬತ್ತು ಪುರುಷ ಸಂಪಾದಕರಿಗೆ ಒಂದು ಮಹಿಳಾ ಸಂಪಾದಕರಿದ್ದಾರೆ. ಮಹಿಳಾ ಕೇಂದ್ರಿತ ವಿಕಿಪೀಡಿಯಾ ಕಾರ್ಯಾಗಾರಗಳನ್ನು ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ನಡೆಸುವುದರಿಂದ ಲಿಂಗ ತಾರತಮ್ಯವನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ಬರೆವಣಿಗೆಯ ಶೈಲಿ, ವ್ಯಾಕರಣ, ಸಂಶೋಧನಾ ಕೌಶಲ್ಯಗಳನ್ನು ಉತ್ತಮಗೊಳಿಸಿ, ವಿಮರ್ಶಾತ್ಮಕ ಆಲೋಚನೆಗಳನ್ನು ತೀಕ್ಷ÷್ಣಗೊಳಿಸಿಕೊಳ್ಳುವುದರ ಮೂಲಕ ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಬಹುದು ಎಂದು ತಿಳಿಸಿದರು.
ಜೂನ್ ೨೦೦೩ ರಲ್ಲಿ ಪ್ರಾರಂಭವಾದ ಕನ್ನಡ ವಿಕಿಪೀಡಿಯಾದಲ್ಲಿ ಪ್ರಸ್ತುತ ೩೦ ಸಾವಿರ ಲೇಖನಗಳಿವೆ. ಸಕ್ರಿಯ ಸಂಪಾದಕರು ೬೫ ಮಂದಿ ಇದ್ದಾರೆ. ಪ್ರತಿ ತಿಂಗಳು ಸುಮಾರು ೭೦ ಲಕ್ಷ ಮಂದಿ ಕನ್ನಡ ವಿಕಿಪೀಡಿಯಾ ವೀಕ್ಷಿಸುತ್ತಾರೆ. ಇಂಗ್ಲಿಶ್ ಭಾಷೆಯಲ್ಲಿ ಒಟ್ಟು ೬೦ ಲಕ್ಷ ಲೇಖನಗಳಿವೆ. ತಿಂಗಳಿಗೆ ಸುಮಾರು ೪೦೦೦ ಸಂಪಾದನೆಗಳನ್ನು ನಾವು ಕಾಣಬಹುದು. ಈ ಸಂಖ್ಯೆಯನ್ನು ಹೆಚ್ಚಿಸಿದಷ್ಟೂ ಅಂತರಜಾಲದಲ್ಲಿ ಕನ್ನಡ ಗಟ್ಟಿಯಾಗುತ್ತಾ ಹೋಗುತ್ತದೆ. ಕನ್ನಡವನ್ನು ಬೆಳೆಸಿದಂತಾಗುತ್ತಾದೆ ಎಂದರು.
ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾತನಾಡಿ, ಜ್ಞಾನಜಗತ್ತಿನ ಯಾವುದೇ ಮಾಹಿತಿಗಾಗಿ ನಾವೆಲ್ಲರೂ ವಿಕಿಪೀಡಿಯಾ ಮೇಲೆ ಅವಲಂಬಿತರಾಗಿದ್ದೇವೆ. ಮಹಿಳಾ ಕೇಂದ್ರಿತ ‘ವಿಕಿಪೀಡಿಯಾ ಭಾಷಾಂತರ ಕಾರ್ಯಾಗಾರ’ ಸರಣಿಯು ಮಹಿಳಾ ಸಬಲೀಕರಣಕ್ಕೆ ಬಲ ನೀಡಿದಂತಾಗುತ್ತದೆ ಎಂದರು.
ಸAಪನ್ಮೂಲ ವ್ಯಕ್ತಿ ಪ್ರಜ್ಞಾ ದೇವಾಡಿಗ ಭಾಗವಹಿಸಿದ್ದರು.
ಅಂತರಜಾಲದಲ್ಲಿ ಮಹಿಳಾ ಕೇಂದ್ರಿತ ಜ್ಞಾನ ವಿಸ್ತಾರವಾಗಲಿ’
Leave a comment
Leave a comment