ನಗರದ ಅಮಾನಿಕೆರೆ ಕೋಡಿಹಳ್ಳ ಶಾಖೆ ವರ್ಷಾಚರಣೆ ಮತ್ತು ದಿವಂಗತ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ರವರ ೨ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಳ್ಳಯಿತು.
ಕಾರ್ಯಕ್ರಮವನ್ನು ಡಾ.ಪುನೀತ್ರಾಜ್ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಡಾ.ಪುನೀತ್ರಾಜ್ ಕುಮಾರ್ ರವರು ಸಮಾಜಕ್ಕೆ ಸಂದೇಶವಾಗಿದ್ದಾರೆ ರಾಜ್ಯದ ಜನರ ಮನಕಲಕುವ ಘಟನೆ ನಡೆದು ಇಂದಿಗೆ ೨ ವರ್ಷ ಆದರೆ ರಾಜ್ಯದಲ್ಲಿ ಅವರನ್ನು ಸ್ಮರಿಸುವ ವಿಭಿನ್ನತೆಗಳು ಬಹಳ ಅಚ್ಚರಿಯಾಗಿವೆ ಸಾವಿನ ನಂತರವು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವರು ತಮ್ಮ ಕಣ್ಣಿನ ದಾನ ಮಾಡಿ ಇಡೀ ಮನುಷ್ಯ ಕುಲಕ್ಕೆ ಮಾದರಿಯಾದವರು ಕೇವಲ ನಟನೆಯಲ್ಲಿ ಅಷ್ಟೇ ಅಲ್ಲದೇ ಸಾಮಾಜಿಕ ಬದಲಾವಣೆಯನ್ನು ಭಯಸಿ ನಿರಂತರ ಜನರಸೇವೆಯಲ್ಲಿ ತೊಡಗಿದ್ದರು ಪುನೀತ್ರಾಜ್ಕುಮಾರ್ ರವರ ಗುಣಗಳನ್ನು ಈಗಿನ ಯುವಪೀಳಿಗೆ ಅಳವಡಿಸಿಕೊಳ್ಳಲಿ. ನಗರದ ಕೋಡಿಹಳ್ಳದಲ್ಲಿ ಸ್ಲಂ ಶಾಖೆ ತೆರೆದು ಒಂದು ವರ್ಷ ಕಳೆದಿದೆ ಸಂಘಟಿತರಾಗಿ ಬದುಕನ್ನು ಕಟ್ಟಿಕೊಳ್ಳುವ ನಿರಂತರ ಹೋರಾಟದ ಭಾಗವಾಗಿ ಜಿಲ್ಲಾಡಳಿತ ಮತ್ತು ನಗರಪಾಲಿಕೆ ಆಶ್ರಯ ಸಮಿತಿ ಗಮನ ಸೆಳೆಯುವಂತ ಕೆಲಸವನ್ನು ಇಲ್ಲಿನ ೩೦ ಕುಟುಂಬಗಳು ಮಾಡಿರುವಂತಹದ್ದು ಅಭಿನಂದನೀಯವಾಗಿದೆ, ನಮ್ಮ ಮುಂದಿನ ಹೋರಾಟ ಮತ್ತು ಜವಾಬ್ದಾರಿ ಹೊನ್ನೇನಹಳ್ಳಿ ಡಾನ್ಬೋಸ್ಕೋ ಶಾಲೆಯ ಆಸುಪಾಸಿನ ಸರ್ವೇ ನಂಬರ್ ನಲ್ಲಿ ಈಗಾಗಲೇ ಸರ್ಕಾರದಿಂದ ೨೦೦ ವಸತಿ ಸಮುಚ್ಛಯಗಳ(ಮನೆಗಳ) ನಿರ್ಮಾಣವಾಗುತ್ತಿವೆ, ಈ ವಸತಿ ಸಮುಚ್ಛಯಗಳಲ್ಲಿ ಕೋಡಿಹಳ್ಳದ ಮಡಿವಾಳ(ಅಗಸ) ಮತ್ತು ಇತರೆ ವೃತ್ತಿನಿರತ ೩೦ ಬಡಕುಟುಂಬಗಳನ್ನು ಪುನರ್ವಸತಿಗೊಳಿಸಲು ಮೊದಲ ಆಧ್ಯತೆ ನೀಡಬೇಕು. ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಈಗಾಗಲೇ ನಗರ ಶಾಸಕರಿಗೆ ಹಲವು ಬಾರಿ ಗಮನಕ್ಕೆ ತರಲಾಗಿದೆ, ಅದರಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರು ತಿಳಿಸಿರುವಂತೆ ಆಧ್ಯತೆ ನೀಡಬೇಕು, ಸದರಿ ನಿರ್ಲಕ್ಷö್ಯ ತೋರಿದರೆ ಹೋರಾಟ ಕೈಗೆತ್ತಿಕೊಳ್ಳಲು ಸಿದ್ದರಾಗಬೇಕಿದೆ ಎಂದರು.
ನಂತರ ಮಾತನಾಡಿದ ಸ್ಲಂ ಸಂಘಟನೆಯ ಕಾರ್ಯದರ್ಶಿ ಅರುಣ್ ತುಮಕೂರು ನಗರ ಸ್ಮಾರ್ಟ್ ಆದಂತೆ ನಗರಕ್ಕಾಗಿ ದುಡಿಯುವ ಜನರ ಜೀವನ ಅತಂತ್ರಗೊಳ್ಳುತ್ತಿದೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಇನ್ನೂ ನಗರದ ನಿವೇಶನ/ವಸತಿ ವಂಚಿತರಿಗೆ ಯೋಜನೆಗಳು ಬರಿ ನೆಪವಾಗಿ ಪೇಪರ್ಗಳಿಗೆ ಸೀಮಿತವಾಗುತ್ತಿವೆ, ನಗರದಲ್ಲಿ ಬದುಕುತ್ತಿರುವ ಸ್ಲಂ ನಿವಾಸಿಗಳ ಪುನರ್ ವಸತಿಗೊಳಿಸಲು ಮಂದಗತಿಯಲ್ಲಿ ಚರ್ಚೆ ಆಗುತ್ತಿವೆ ಹೊರತು ಯಾವುದು ಕಾರ್ಯರೂಪಕ್ಕೆ ಬರುತ್ತಿಲ್ಲ, ನಗರದ ೩ ಸ್ಲಂ ಗಳಾದ ಭಾರತಿ ನಗರ, ಎಸ್,ಎನ್ ಪಾಳ್ಯ, ಕೋಡಿಹಳ್ಳ ಸ್ಲಂಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಜನತಾ ದರ್ಶನದಲ್ಲಿ ಒತ್ತಾಯಿಸಿದರು ಯಾವುದೇ ಬೆಳವಣಿಗೆ ಕಾಣುತ್ತಿಲ್ಲ, ಇನ್ನೂ ನಗರದ ವಿವಿಧ ಕೊಳಗೇರಿಗಳಲ್ಲಿ ಪ್ರದಾನಮಂತ್ರಿ ಆವಾಸ್ ಯೋಜನೆಯಡಿ ಗುಡಿಸಲು ಮುಕ್ತ ೪೯೭ ಮನೆಗಳ ಕಾಮಾಗಾರಿಯು ಗುತ್ತಿಗೆದಾರರಿಗೆ ಬಿಲ್ ಆಗಿಲ್ಲ ಎಂಬ ಕಾರಣದಿಂದ ಮಂದಗತಿಯಲ್ಲಿ ಸಾಗುತ್ತಿವೆ ಸಂಕಷ್ಟದ ಸ್ಲಂಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವಾಸ್ತವ್ಯ ಹೂಡಲಿ ಜಿಲ್ಲಾ ಮಟ್ಟದ ಜನತಾ ದರ್ಶನವನ್ನು ವಾರ್ಡ್ ವ್ಯಾಪ್ತಿಗೆ ವಿಸ್ತರಿಸಿ ಜನರ ಸಮಸ್ಯೆಗಳನ್ನು ಪರಿಹರಿಸಲಿ ಎಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಉಪಾಧ್ಯಕ್ಷರಾದ ಶಂಕ್ರಯ್ಯ, ಸ್ಥಳೀಯ ಮುಖಂಡರಾದ ಮೋಹನ್ಕುಮಾರ್, ಕೋಡಿಹಳ್ಳ ಸ್ಲಂಶಾಖೆಯ ಪದಾಧಿಕಾರಿಗಳಾದ ಗಣೇಶ್, ಗೋವಿಂದರಾಜ್, ಮಂಜುನಾಥ್, ವೆಂಕಟೇಶ್, ಅಶ್ವತ್, ಜಯಮ್ಮ, ಲಕ್ಷಿö್ಮÃದೇವಮ್ಮ, ಲಕ್ಷö್ಮಮ್ಮ, ಕವಿತಾ, ಕೆಂಪಮ್ಮ, ಹೊನ್ನಮ್ಮ,ದೊಡ್ಡತಾಯಮ್ಮ, ಪಾಪಣಿ, ಮಂಜುಳ ಮುಂತಾದವರು ಪಾಲ್ಗೊಂಡಿದ್ದರು.
ಪುನೀತ್ರಾಜ್ಕುಮಾರ್ ರವರ ಸಾಮಾಜಿಕ ಕಳಕಳಿಯನ್ನು ಈಗಿನ ಯುವಪೀಳಿಗೆ ಅಳವಡಿಸಿಕೊಳ್ಳಲಿ
Leave a comment
Leave a comment