ಮಾಲಿನ್ಯ ರಹಿತ ಪರಿಸರವಾಗಲಿ: ನಾಹಿದಾ ಜಮ್ ಜಮ್ತುಮಕೂರು: ವಿದ್ಯಾರ್ಥಿಗಳು ಪರಿಸರದ ಮೇಲೆ ಕಾಳಜಿ ವಹಿಸಿ ಪರಿಸರಸ್ನೇಹಿಯಾಗಬೇಕು. ಇದರಿಂದ ಪರಿಸರ ಜೊತೆ ಸಂಭಾಷಣೆ ಸಾಧ್ಯವಾಗಿ ಮಾಲಿನ್ಯ ರಹಿತ ಪರಿಸರ ನಿರ್ಮಿಸಬಹುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಸೋಮವಾರ ಆಯೋಜಿಸಿದ್ದ ‘ವಿಶ್ವಪರಿಸರ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ಲಾಸ್ಟಿಕ್ ಬಳಕೆ ಅತೀ ಹೆಚ್ಚಾಗಿ ಹಲವಾರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದಷ್ಟು ಪ್ಲಾಸ್ಟಿಕ್ ಬಳಕೆಯಿಂದ ದೂರ ಇದ್ದು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು ಎಂದರು.ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಮಾತನಾಡಿ, ಇಂದು ಪರಿಸರದಲ್ಲಿ ಅಸಮತೋಲನ ನೋಡುತ್ತಿದ್ದೇವೆ. ನಾವು ಸೇವಿಸುವಂತ ಗಾಳಿಯು ವಿಷಯುಕ್ತವಾಗಿದೆ. ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಮೊದಲು ನಾವು ಇದರಿಂದ ಎಚ್ಚೆತ್ತುಕೊಂಡು ಉತ್ತಮ ಪರಿಸರದ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.ಕೊಡಗು ಜಿಲ್ಲೆ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ವಿಭಾಗದ ಕೃಷಿಶಾಸ್ತç ಪ್ರಾಧ್ಯಾಪಕ ಡಾ. ಎಂ. ಜಡೇಗೌಡ ‘ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ. ದ್ವಾರಕಾನಾಥ್ ವಿ. ಸ್ವಾಗತಿಸಿದರು. ನಿರೂಪಿಸಿದರು.