ಕೂಡಿ ಬಾಳುವ, ಕೂಡಿ ದುಡಿಯುವ, ಕೂಡಿ ಉಣ್ಣುವ ಮಹಾಗುಣವೇ ಬಾಂಧವ್ಯ ಎನಿಸುವುದು. ಬಾಂಧವ್ಯ ಬದುಕಿನ ಬುನಾದಿಯಾಗಲಿ ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು.ಇಲ್ಲಿನ ಮಾರುತಿ ನಗರದಲ್ಲಿರುವ ಬಾಂಧವ್ಯ ಮಹಿಳಾ ಸಮಾಜದ ಮಾಸಿಕ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ಮಹಿಳೆಯರು ತಮ್ಮ ತಮ್ಮ ಕುಟುಂಬಗಳನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಮುಂದಾಗಬೇಕು. ಕುಟುಂಬದ ಕಲ್ಯಾಣವಾದರೆ ರಾಷ್ಟçದ ಕಲ್ಯಾಣ ತಾನಾಗಿಯೇ ಆಗುತ್ತದೆ. ಮಕ್ಕಳು ಮೊಬೈಲ್ನಿಂದ, ಮಹಿಳೆಯರು ದೂರದರ್ಶನ ಪೆಟ್ಟಿಗೆಗಳಿಂದ ಮೊದಲು ದೂರಾಗಬೇಕು ಎಂದು ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ಬಾಂಧವ್ಯ ಮಹಿಳಾ ಸಮಾಜದ ಅಧ್ಯಕ್ಷೆ ಲಕ್ಷಿ÷್ಮಅಯ್ಯಂಗಾರ್ ಅವರು ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿ, ಮಹಿಳೆಯರು ಸುಶಿಕ್ಷಿತರಾಗಿದ್ದಾರೆ. ಅವರು ಸೃಜನಶೀಲರಾಗಬೇಕು. ಕುಟುಂಬಕ್ಕೆ ಸೀಮಿತವಾಗದೆ ರಾಷ್ಟç ಕಟ್ಟುವ ಕಾರ್ಯದಲ್ಲಿ ಪ್ರಾಂಜಲ ಚಿತ್ತದಿಂದ ಮುಂದಾಗಬೇಕೆAದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರೇಮ ರಾಮೇಗೌಡ, ಜಯಲಕ್ಷಿ÷್ಮ ರಾಮಚಂದ್ರಯ್ಯ, ರಾಧಾ ಅಶ್ವಥ್ ಮತ್ತಿತರರು ಉಪಸ್ಥಿತರಿದ್ದರು. ಸಾವಿತ್ರಿ ವಿಜಯಕುಮಾರ್ ಪ್ರಾರ್ಥಿಸಿದರು. ಜಯಶ್ರೀ ವಿಶ್ವೇಶ್ವರಯ್ಯ ಸ್ವಾಗತಿಸಿದರು. ಲಕ್ಷಿ÷್ಮಮಹಾಲಿಂಗಪ್ಪ ವಂದಿಸಿದರು. ವಸುಂಧರ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.