ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಂಜೀವಿನಿ ಬೆಟ್ಟ ಎಂದೇ ಪ್ರಸಿದ್ಧವಾದ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ತಪ್ಪಲಿನಲ್ಲಿರುವ ತೋವಿನಕೆರೆ ಬಳಿ ಇರುವ ಸಿವಿಡಿಪಾಳ್ಯ ದ ಸಿದ್ದಲಿಂಗಯ್ಯ ಎಂಬುವರ ತೋಟದ ಮನೆಯ ಹತ್ತಿರ ಬೆಳಗಿನ ಜಾವ 6:30ರ ಸುಮಾರಿಗೆ ದೊಡ್ಡ ಹಸುಗಳ ಮೇಲೆ ದಾಳಿ ಮಾಡಿ ಸುಲಭವಾಗಿ ಸಿಕ್ಕಂತ 9 ತಿಂಗಳ ಹಸುಕರು ಮೇಲೆ ಯರಗಿ ಜೀವ ತೆಗೆದು ಓಡಿ ಹೋಗಿದೆ….. ಈ ಚಿರತೆ ದಾಳಿಯಿಂದ ತೋವಿನಕೆರೆ ಯ ಸುತ್ತಮುತ್ತಲಿರುವ ಹಳ್ಳಿಗಳ ಜನರಲ್ಲಿ ಆತಂಕ ಮನೆ ಮಾಡಿದ್ದು ಭೀತಿಯಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲ ಚಿರತೆಯನ್ನು ಸೆರೆಹಿಡಿಯಬೇಕೆಂದು ಆ ಊರಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದರು…. ಇನ್ನು ಕರುವನ್ನು ಕಳೆದುಕೊಂಡ ಮಾಲೀಕ ಸಿದ್ದಲಿಂಗಯ್ಯನವರು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದು ಸ್ಥಳಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದಂತಹ ಪ್ರಸನ್ನ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು