ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳು-ನ್ಯಾ.ಕೆ.ಬಿ.ಗೀತಾ
ನ್ಯಾ.ಕೆ.ಎಸ್.ನಮ್ರತಾರಾವ್ ಮತ್ತು ಹೆಚ್.ಅನಂತ್ ರವರಿಗೆ ಸ್ವಾಗತ ಕೋರಿದ ವಕೀಲರು
ತುಮಕೂರು: ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪರಸ್ಪರ ಸಹಕಾರ ಮತ್ತು ವಿಶ್ವಾಸ ಮತ್ತು ಸಹಕಾರದಿಂದ ನ್ಯಾಯಾಲಯವನ್ನು ನಡೆಸಬೇಕು,ಕಕ್ಷಿದಾರರ ಹಿತವನ್ನು ಕಾಯಬೇಕು,ಜುಲೈ ೮ರಂದು ನಡೆಯುವ ಬೃಹತ್ ಲೋಕ್ ಅದಾಲತ್ ನಲ್ಲಿ ಹೆಚ್ಚು ಕೇಸುಗಳು ಇತ್ಯರ್ಥವಾಗಲು ವಕೀಲರ ಸಹಕಾರ ಅಗತ್ಯ,ತುಮಕೂರು ತಾಲ್ಲೋಕಿನಲ್ಲಿ ಹೆಚ್ಚು ಕೇಸುಗಳು ನ್ಯಾಯಾಲದಲ್ಲಿ ಬಾಕಿ ಇವೆ,ಎರಡೂ ಕಡೆಯ ಕಕ್ಷಿದಾರರನ್ನು ಕರೆಸಿ ಮಾತನಾಡಿ ರಾಜೀ ಸಂಧಾನ ನಡೆಸಿ ಕೇಸುಗಳನ್ನುಮುಕ್ತಾಯಗೊಳಿಸಲು ಸಹಕಾರ ನೀಡಿ,ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನು ಬಗೆಹರಿಸೋಣ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ.ಗೀತಾರವರು ತಿಳಿಸಿದರು.
ಅವರು ಇಂದು ಜಿಲ್ಲಾ ವಕೀಲರ ಸಂಘದಲ್ಲಿ ವರ್ಗಾವಣೆ ಆಗಿ ಆಗಮಿಸಿರುವ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದರು.
ಪ್ರಧಾನ ಮತ್ತು ಸಿವಿಲ್ ಜೆಎಂಎಫ್.ಸಿ.ನ್ಯಾಯಾಧೀಶರಾದ ಕೆ.ಎಸ್.ನಮ್ರತಾರಾವ್ ರವರು ವಕೀಲರ ಸಹಕಾರದಿಂದ ತುಮಕೂರಿನಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ ಆದ್ದರಿಂದ ಎಲ್ಲರ ಸಹಕಾರ,ಸಲಹೆ ಮುಖ್ಯ ಎಂದು ತಿಳಿಸಿದರು.
೬ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಅನಂತ್ ರವರು ಮಾತನಾಡುತ್ತಾ ವಕೀಲರು ತಮ್ಮ ಕಕ್ಷಿದಾರರ ಪರ ಯಾವುದೇ ಆದೇಶ ಬಂದರೂ ಸ್ವಾಗತಿಸಬೇಕು,ಒಂದು ಕೇಸಿನಲ್ಲಿ ಸೋತರೂ ಮೇಲಿನ ನ್ಯಾಯಾಲಯದಲ್ಲಿ ಅಪೀಲು ಹೋಗಬಹುದು ಅದಕ್ಕೆ ಮುಕ್ತ ಅವಕಾಶ ಇರುತ್ತದೆ,ಯಾವುದೇ ವಿಚಾರವನ್ನು ವೈಯಕ್ತಿಕವಾಗಿ ವಕೀಲರ ತೆಗೆದುಕೊಳ್ಳಬಾರದು,ನ್ಯಾಯಾಧೀಶರು ಸಹ ವಕೀಲರ ಸಂಘದ ಸದಸ್ಯರಾಗಿ ಬಂದವರೇ ಆಗಿದ್ದೇವೆ,ವಕೀಲರ ಸಹಕಾರ ನ್ಯಾಯಾಲಯಕ್ಕೆ ಸದಾ ಅವಶ್ಯಕವಾದುದು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ವಕೀಲರಿಗೆ ನ್ಯಾಯಾಲಯ ಸದಾ ಸಹಕಾರ ನೀಡಬೇಕು, ತಮ್ಮ ಕಕ್ಷಿದಾರರ ಹಿತ ಕಾಯುವವರು ನಾವುಗಳು,ವಕೀಲ ವೃತ್ತಿ ಮಾಡುವ ನಮಗೆ ಪಾರ್ಕಿಂಗ್,ನೂತನ ಕಟ್ಟಡ,ಹೀಗೆ ಹತ್ತಾರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು,ಈ ಬಗ್ಗೆ ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ನಿಮ್ಮೊಂದಿಗೆ ನಾವುಗಳು ಇದ್ದೇವೆ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಅಭಯ ನೀಡಿದರು.
ಶಿವಶಂಕರಯ್ಯ ಸ್ವಾಗತಿಸಿ,ಆರ್.ತಿಪ್ಪೇಸ್ವಾಮಿ ನಿರೂಪಿಸಿ,ಭಾರತಿರವರು ವಂದಿಸಿದರು.ಸಿದ್ದರಾಜು ಪ್ರಾರ್ಥಿಸಿದರು,ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳು,ಎಲ್ಲಾ ಹಿರಿಯ ಕಿರಿಯ ಮಹಿಳಾ ವಕೀಲರುಗಳು ಉಪಸ್ಥಿತರಿದ್ದರು.ವಕೀಲರ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ, ಉಪಾಧ್ಯಕ್ಷರಾದ ಶಿವಶಂಕರಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಜಂಟಿ ಕಾರ್ಯದರ್ಶಿ ಸಿ.ಪಾಲಾಕ್ಷಯ್ಯ,ಖಜಾಂಚಿ ಕೆ.ಎಲ್.ಭಾರತಿ,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಎಂ.ಬಿ.ಗುರುಪ್ರಸಾದ್, ಟಿ.ಎಸ್.ಜನಾರ್ಧನ್,ಎಂ.ಬಿ.ನವೀನ್ ಕುಮಾರ್, ಎಸ್.ಮೋಹನ್, ಶಿವಕುಮಾರಸ್ವಾಮಿ, ಪಿ.ಎಸ್.ಸಂದೀಪ್ ಉಪಸ್ಥಿತರಿದ್ದರು.
ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ
Leave a comment
Leave a comment