‘ಗೃಹಜ್ಯೋತಿ’ ಯೋಜನೆಗೆ ಜಿಲ್ಲೆಯ ೫,೫೪,೩೩೩ ಗೃಹ ಬಳಕೆ ಗ್ರಾಹಕರು ನೋಂದಣಿ-ಸಚಿವ ಡಾ: ಜಿ. ಪರಮೇಶ್ವರ
ತುಮಕೂರು(ಕ.ವಾ.) ಆ.೫: ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ವಿದ್ಯುತ್ಚ್ಛಕ್ತಿ ಸೌಲಭ್ಯವನ್ನು ರಾಜ್ಯದ ಅರ್ಹ ಗೃಹ ಬಳಕೆದಾರರಿಗೆ ಒದಗಿಸಲು ‘ಗೃಹಜ್ಯೋತಿ’ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದು, ನೋಂದಣಿಯನ್ನು ರಾಜ್ಯಾದ್ಯಂತ ಚಾಲನೆಗೊಳಿಸಲಾಗಿದ್ದು, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೭,೮೨,೫೪೨ ಗೃಹ ಬಳಕೆ ಗ್ರಾಹಕರ ಪೈಕಿ ೫,೫೪,೩೩೩ ಗ್ರಾಹಕರು ಇಲ್ಲಿಯವರೆಗೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.
ನಗರದ ಎಂಪ್ರೆಸ್ ಕಾಲೇಜು ಸಭಾಭವನದಲ್ಲಿಂದು ಏರ್ಪಡಿಸಲಾಗಿದ್ದ ಉಚಿತ ಬೆಳಕು ಸುಸ್ಥಿರ ಬದುಕು ‘ಗೃಹಜ್ಯೋತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿಯವರೆಗೆ ಶೇ.೭೦ರಷ್ಟು ನೋಂದಣಿಯಾಗಿದ್ದು, ಈ ತಿಂಗಳ ೧೫ರೊಳಗಾಗಿ ಶೇ.೧೦೦ರಷ್ಟು ಗೃಹಜ್ಯೋತಿ ಯೋಜನೆಯ ನೋಂದಣಿ ಮಾಡಬೇಕು. ಅಧಿಕಾರಿಗಳು ಯಾವುದೇ ಸಬೂಬು ಹೇಳಬಾರದೆಂದು ಸೂಚಿಸಿದರು.
ತುಮಕೂರು ಜಿಲ್ಲೆಯಲ್ಲಿ ‘ಗೃಹಜ್ಯೋತಿ’ ಯೋಜನೆಗೆ ಚಾಲನೆ
Leave a comment
Leave a comment