ನವ್ಯದಿಶ ಸಂಸ್ಥೆಯು 2005 ರಲ್ಲಿ ಸ್ಥಾಪನೆಗೊಂಡು, ಭಾರತದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಈ ನಾಲ್ಕು ರಾಜ್ಯಗಳಲ್ಲಿ ಸಂಸ್ಥೆಯು ನೀರು ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ರೈತರು, ಮಕ್ಕಳು ಮತ್ತು ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಹಲವಾರು ವಿಷಯಗಳಿಗೆ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಸದ್ಯ ಕಳೆದ ಒಂದು ವರ್ಷದಿಂದ, ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ 15 ಪ್ರೌಢಶಾಲೆಗಳಲ್ಲಿ ಸುಶಿಕ್ಷಣ ಜೀವನ ಕೌಶಲ್ಯ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಜೀವನ ಕೌಶಲ್ಯಗಳ ಜೊತೆಗೆ, ವೃತ್ತಿ ಮಾರ್ಗದರ್ಶನ ಹಣಕಾಸು ನಿರ್ವಹಣೆ ಹೆಣ್ಣುಮಕ್ಕಳಿಗೆ ಮುಟ್ಟಿನ ನೈರ್ಮಲ್ಯ, ಆರೋಗ್ಯ ಮತ್ತು ಪೌಷ್ಟಿಕತೆ, ಉದ್ಯಮಶೀಲತಾ ಮನೋಭಾವ, ಪರೀಕ್ಷಾ ಸಿದ್ಧತಾ ಕೌಶಲ್ಯಗಳನ್ನೊಳಗೊಂಡ ತರಗತಿಗಳನ್ನು ನಡೆಸುವ ಯೋಜನೆಯನ್ನು ರೂಪಿಸಿದ್ದೇವೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಪ್ರಾಜೆಕ್ಟ್ ಮೆನೇಜರ್ ಆದ ಜನಾರ್ಧನರವರು ತಿಳಿಸಿದರು.
ಸಿರಾ ತಾಲ್ಲೂಕಿನ ಅಮಲಗೊಂದಿ ಶ್ರೀ ಬೊಮ್ಮಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆ ಮತ್ತು ನವ್ಯದಿಶ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಸುಶಿಕ್ಷಣ ಜೀವನ ಕೌಶಲ್ಯ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೌಶಲಯುತ ಚಟುವಟಿಕೆಗಳನ್ನು ಆಡಿಸಲಾಯಿತು. ನಂತರ ಮಕ್ಕಳು ಕಳೆದ ವರ್ಷ ಜೀವನ ಕೌಶಲ್ಯಗಳ ತರಗತಿಯಲ್ಲಿ ಕಲಿತ ಅನುಭವಗಳನ್ನು ಹಂಚಿಕೊಂಡರು.