ತುಮಕೂರು : ನಗರದ ಉಪ್ಪಾರಹಳ್ಳಿ ಬಡಾವಣೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ದಾನದ ರೂಪದಲ್ಲಿ ನಿವೇಶನವನ್ನು ಕಲ್ಪಿಸಿಕೊಟ್ಟಿದ್ದ ಮೈಲಾರಪ್ಪನವರ ಮಗಳಾದ ಈರಮ್ಮನವರಿಗೆ ಇವರ ಕುಟುಂಬದವರು ಸರ್ಕಾರಿ ಶಾಲೆಗೆ ಮಾಡಿದ ಅನನ್ಯ ಸೇವೆಯನ್ನು ಸ್ಮರಿಸಿ ಇತ್ತೀಚೆಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಆಚರಿಸಲಾದ ಒನಕೆ ಓಬವ್ವ ಜಯಂತೋತ್ಸವದ ಪ್ರಯುಕ್ತ “ಒನಕೆ ಓಬವ್ವ ಪ್ರಶಸ್ತಿಯನ್ನು” ನೀಡಿ ಗೌರವಿಸಲಾಗಿತ್ತು.
ಉಪ್ಪಾರಹಳ್ಳಿ ಬಡಾವಣೆಯ ನಾಗರೀಕರಾದ ಈರಮ್ಮನವರಿಗೆ ಲಭಿಸಿದ ಪ್ರಶಸ್ತಿಯ ಪ್ರಯುಕ್ತ ಉಪ್ಪಾರಹಳ್ಳಿ ಗ್ರಾಮದೇವತೆ ಕಾಳಘಟ್ಟಮ್ಮ ದೇವಸ್ಥಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀ ಕಾಳಘಟ್ಟಮ್ಮ ಜೀರ್ಣೋದ್ಧಾರ ಸೇವಾ ಸಮಿತಿ ವತಿಯಿಂದ ಈರಮ್ಮನವರ ಕುಟುಂಬದವರು ಮಾಡಿರುವ ಸೇವೆಯನ್ನು ಸ್ಮರಿಸುವುದರೊಂದಿಗೆ ಇತರರಿಗೆ ಪ್ರೇರಣಾದಾಯಕವಾಗಿರುವ ಕಾರ್ಯವನ್ನು ಶ್ಲಾಘಿಸಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಮುರಳಿಧರ ಹಾಲಪ್ಪ, ಗಂಗಮ್ಮ, ಉಪ್ಪಾರಹಳ್ಳಿ ಕುಮಾರ್, ನರಸಿಂಹಣ್ಣ, ಸೂರಣ್ಣ, ನಾಗೇಶ್, ಪ್ರಕಾಶ್, ನಾರಾಯಣಪ್ಪ, ಮಧು, ರೇವಣಸಿದ್ದಪ್ಪ ಹಾಗೂ ಇತರರು ಉಪಸ್ಥಿತರಿದ್ದರು