ಕೇಂದ್ರ ಸರ್ಕಾರ ಕೂಡಲೇ ಖಾದ್ಯ ತೈಲ ಅಮದು ನಿಯಂತ್ರಿಸಿ, ರಾಜ್ಯದ ಕೊಬ್ಬರಿ ಬೆಳೆಗಾರರನ್ನು ರಕ್ಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಖಾದ್ಯ ತೈಲ ಅಮದು ಸುಂಕ ವಿನಾಯಿತಿಯನ್ನು 31 ಮಾರ್ಚ್ 2025 ರ ತನಕ ವಿಸ್ತರಿಸಿದೆ. ಭಾರೀ ಪ್ರಮಾಣದ ಹಾಗೂ ದೀರ್ಘಕಾಲದ ವರೆಗಿನ ಸುಂಕ ಕಡಿತದ ಪ್ರೊತ್ಸಾಹದಿಂದ ದಾಖಲೆ ಪ್ರಮಾಣದಲ್ಲಿ ಕಚ್ಚಾ ಹಾಗೂ ಸಂಸ್ಕರಿತ ಖಾದ್ಯ ತೈಲ ದೇಶಕ್ಕೆ ಅಮದಾಗುತ್ತಿದೆ. ಇದರಿಂದಾಗಿ ರಾಜ್ಯದ ರೈತರ ಕೊಬ್ಬರಿಯ ಬೆಲೆ ಕುಸಿತ ಮುಂದುವರೆದಿದೆ. ಈ ತಪ್ಪು ನೀತಿಯನ್ನು ಮರೆ ಮಾಚಿ ರೈತರನ್ನು, ಬಿಜೆಪಿ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಪಾದಿಸುತ್ತದೆ.
ಈ ವರ್ಷಕ್ಕೆ ರಾಜ್ಯದಲ್ಲಿ ಖರೀದಿ ಮಾಡುವ ಮಿತಿಯನ್ನು 62500 ಕ್ವಿಂಟಾಲ್ ಗೆ ಕೇಂದ್ರ ಸರ್ಕಾರ ನಿಗದಿ ಮಾಡಿತ್ತು. ಕೇವಲ ನಾಲ್ಕೇ ದಿನದಲ್ಲಿ ಈ ಗುರಿ ಮುಟ್ಟಿರುವುದರಿಂದ ನಪೇಡ್ ಖರೀದಿ ಪ್ರಕ್ರಿಯೆಯನ್ನು ನಿಲ್ಲಿಸಿದೆ. ಈ ತಕ್ಷಣವೇ ಸ್ಥಗಿತಗೊಂಡಿರುವ ನಪೇಡ್ ಖರೀದಿ ನೋಂದಣಿಯನ್ನು ಪುನರ್ ಆರಂಭಿಸಬೇಕು. ವರ್ಷ ಪೂರ್ತಿ ಖರೀದಿ ಕೇಂದ್ರ ಚಾಲ್ತಿಯಲ್ಲಿ ಇರಬೇಕು, ರಾಜ್ಯದಲ್ಲಿ ಉತ್ಪಾದನೆ ಆಗಿರುವ ರೈತರ ಎಲ್ಲಾ ಕೊಬ್ಬರಿಯನ್ನು ಖರೀದಿ ಮಾಡಬೇಕು ಕೇಂದ್ರ ಸರ್ಕಾರ ಹಾಗೂ ನಪೇಡ್ ಮೇಲೆ ಖರೀದಿ ಒತ್ತಡ ಕಡಿಮೆ ಮಾಡಬೇಕಾದರೆ ತಾಳೆ, ಸೂರ್ಯಕಾಂತಿ ಮುಂತಾದ ಖಾದ್ಯ ತೈಲ ಅಮದನ್ನು ನಿಯಂತ್ರಿಸಬೇಕು. ಕನಿಷ್ಟ ಈ ಹಿಂದೆ ಇದ್ದ ಅಮದು ಸುಂಕವನ್ನಾದರೂ ಮುಂದುವರೆಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದು ಒತ್ತಾಯಿಸಬೇಕು ಹಾಗೂ ರಾಜ್ಯದ ಕೊಬ್ಬರಿ ಬೆಳೆಗಾರರು, ಈ ಭಾಗದ ಜನಪ್ರತಿನಿಧಿಗಳ ನಿಯೋಗವನ್ನು ಪ್ರಧಾನಿ ಬಳಿ ಕರೆದೊಯ್ದು ಆಗ್ರಹಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.
ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ ಪೆಬ್ರವರಿ 16 ರಂದು ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರೈತ-ಕಾರ್ಮಿಕರ ಪ್ರತಿಭಟನೆ