ದೇವಾನಂದ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಕೋಲಿ ಸಮಾಜ ಆಗ್ರಹ.
ಕೋಲಿ ಸಮಾಜದ ದೇವಾನಂದ್ ತಂದೆ ರಾಮಚಂದ್ರಪ್ಪ ಕೋರಬ ಕಲಗುರತಿ ಗ್ರಾಮದ ಯುವಕನನ್ನು ಮಾಡಬೂಳ ಠಾಣೆ ಪೋಲಿಸ ಇಲಾಖೆಯವರು ಸಂಬಂಧ ಇಲ್ಲದ ಕೇಸಿನ ಬಗ್ಗೆ ವಿಚಾರಣೆ ನೆಪ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯನ್ನು ನೀಡಿರುತ್ತಾರೆ ಅದನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ನಡೆದು ಮೂರು ತಿಂಗಳಾದರೂ ಸಂಬಂಧಪಟ್ಟ ಆರೋಪಿಯನ್ನು ಬಂಧಿಸದೆ ಇರುವುದು ಕೋಲಿ ಸಮಾಜಕ್ಕೆ ಕಡೆಗಣಿಸಿದ್ದಾರೆ ಎಂದು ಶಹಾಬಾದ್ ತಾಲೂಕು ಕೋಲಿ ಸಮಾಜದ ಮುಖಂಡ ನಿಂಗಣ್ಣ ಹುಳಗೋಳ್ಕರ ಹೇಳಿದರು.
ಈ ವಿಷಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಎಸ್. ಪಿ ಅವರ ಗಮನಕ್ಕೆ ತಂದರೂ ಕೂಡ ಆರೋಪಿಯನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಈಗಲಾದರೂ ಆರೋಪಿಯನ್ನು ಕೂಡಲೇ ಬಂಧಿಸಿ ದೇವಾನಂದ್ ಕೋರಬ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿ ನ್ಯಾಯ ಒದಗಿಸಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಕಾನೂನು ಭಂಗ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಹರವಾಳ, ಶರಣಪ್ಪ ತಳವಾರ್, ರಮೇಶ್ ಫಿರೋಜಬಾದ, ಅವ್ವಣ್ಣ ಮ್ಯಾಕೇರಿ, ತಿಪ್ಪಣ್ಣ ನಾಟೀಕರ, ದೇವಿಂದ್ರ ಕಾರೋಳ್ಳಿ, ಲಕ್ಷ್ಮಿಕಾಂತ್ ಕುಂದಗೋಳ, ಶಿವಕುಮಾರ್ ಸುನಗಾರ ,ತಿಪ್ಪಣ್ಣ ದಿಗ್ಗಿ , ಶಿವಪ್ಪ ಬುರ್ಲಿ, ಶರಣು ಹಲಕಟ್ಟಿ, ವಿಶ್ವ ಫಿರೋಜಬಾದ, ಮೋಹನ್ ತಳವಾರ್ ಸೇರಿದಂತೆ ಕೋಲಿ ಸಮಾಜದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವರದಿ ನಿಂಗಣ್ಣ ಜಂಬಗಿ ಶಾಹಾಬಾದ.