ಅವ್ವಣ್ಣ ಮ್ಯಾಕೆರಿ ಕೋಲಿ ಕಬ್ಬಲಿಗ ಸಮಾಜದ ಪ್ರಭಾವಿ ಹಿಂದುಳಿದ ನಾಯಕರು ಮತ್ತು ಬಿಜೆಪಿ ಪಕ್ಷದ ನಿಷ್ಠಾವಂತ ಮುಖಂಡರು ಮತ್ತು ಒಂದೇ ಪಕ್ಷದಲ್ಲಿ 20 ವರ್ಷಗಳಿಂದ ದುಡಿಯುತ್ತಾ ಬಂದ ಹಿಂದುಳಿದ ನಾಯಕರಾಗಿದ್ದು. ಇವರನ್ನು ಬಿಜೆಪಿ ಕಲಬುರ್ಗಿ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಕೋಲಿ ಕಬ್ಬಲಿಗ ಸಮಾಜದವರು ಈ ಹಿಂದೆ ದಿನಾಂಕ ಐದು05-01 2024 ರಂದು ಸುದ್ದಿಗೋಷ್ಠಿ ಮಾಡುವ ಮೂಲಕ ಜಿಲ್ಲೆಯ ಬಿಜೆಪಿ ಮುಖಂಡರಿಗೂ ಹಾಗೂ ರಾಜ್ಯ ಅಧ್ಯಕ್ಷರಿಗೂ ಕೂಡ ಮನವಿ ಮಾಡಿದರು.
ಕೋಲಿ ಕಬ್ಬಲಿಗ ಸಮಾಜದ ಮುಖಂಡರಾದ ಪ್ರೇಮ್ ಕೋಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಲ್ಬುರ್ಗಿ ಜಿಲ್ಲೆಯಲ್ಲಿ 5-6 ಲಕ್ಷ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜವನ್ನು ಬಿಜೆಪಿ ಪಕ್ಷ ಕೇವಲ ಮತದಾನಕ್ಕೆ ಮಾತ್ರ ಸೀಮಿತ ಅಧಿಕಾರ ಅಲ್ಲ ಎಂಬಂತೆ ಕೋಲಿ ಸಮಾಜವರನ್ನು ನಡೆಸಿಕೊಳ್ಳುತ್ತಿದೆ ನಮ್ಮ ಸಮಾಜದವರನ್ನು ಯಾವುದೇ ಹುದ್ದೆ ನೀಡದೆ ಕಡೆಗಣಿಸುತ್ತಿದ್ದಾರೆ.
ಈಗಾಗಲೇ ಈ ಹಿಂದೆ ಇದ್ದ ಅಧ್ಯಕ್ಷರ ನೇಮಕ ಮಾಡಲಾಗಿದ್ದು ಅವರನ್ನೆ ನೇಮಕ ಮಾಡುವ ಉದ್ದೇಶ ಪಕ್ಷಕ್ಕಿದ್ದರೆ ಜಿಲ್ಲಾ ಅಧ್ಯಕ್ಷ ಸ್ಥಾನ ಖಾಲಿ ತೋರಿಸುವ ಬದಲಾಗಿ ಅವರನ್ನೇ ಮುಂದುವರಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಬಹುದಿತ್ತು ಇದೆಲ್ಲ ಬಿಟ್ಟು ಜಿಲ್ಲಾಧ್ಯಕ್ಷರ ಹುದ್ದೆಗೆ ಆಕಾಂಕ್ಷಿಗಳ ಪಟ್ಟಿ ಸಂಗ್ರಹ ಮಾಡಿ ಅವರ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುವಂತೆ ನಾಟಕವಾಡಿ ಕೋಲಿ ಸಮಾಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ಹಿಂದೆ ಇದ್ದ ಅಧ್ಯಕ್ಷರನ್ನ ನೇಮಕ ಮಾಡುವ ಮೂಲಕ ಕೋಲಿ ಸಮಾಜವನ್ನು ಈ ಪಕ್ಷ ಕಡೆಗಣಿಸಿದೆ.
ಒಂದು ವೇಳೆ 23.01.2023ರ ಒಳಗಾಗಿ ಮರು ನೇಮಕ ಮಾಡಿ ಆದೇಶ ಹೊರಡಿಸದೆ ಇದ್ದ ಸಂದರ್ಭದಲ್ಲಿ ಬಿಜೆಪಿ ಹಠವು ಪೊಲೀಸ್ ಬಚಾವೋ ಎಂಬ ಅಭಿಯಾನ ಪ್ರಾರಂಭ ಮಾಡಬೇಕಾಗುತ್ತದೆ ಎಂದು ಬಿಜೆಪಿ ಪಕ್ಷಕ್ಕೆ ಸುದ್ದಿಗೋಷ್ಠಿಯ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರವಿ ಡೊಂಗರಗಾಂವ, ಪ್ರೇಮ್ ಕೋಲಿ, ಶಿವಕುಮಾರ್ ಕಲಗುರ್ತಿ ,ಪರಮಾನಂದ್ ಬಾಗೋಡಿ ,ಪರಮೇಶ್ವರ ಜಮಾದಾರ್ ,ಬೆಳ್ಳಪ್ಪ ಇಂಗನಕಲ, ಸಂತೋಷ್ ಜಮಾದಾರ್ ,ಸಂತೋಷ್ ಕಲ್ಲೂರ್, ಬಾಬುಗೌಡ, ಪ್ರವೀಣ್ ಜಮಾದಾರ್, ಮತ್ತು ವಿಜಯ್ ಕುಮಾರ್ ಜಮಾದಾರ್ ಉಪಸ್ಥಿತರಿದ್ದರು