ಕಲ್ಬುರ್ಗಿ ನಗರದಲ್ಲಿ ಇಂದು ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವಲಯ ಸಮಿತಿ ಕಲಬುರ್ಗಿ ವತಿಯಿಂದ ಸಂವಿಧಾನ ಜಾಗೃತಿ ಮತ್ತು ಸಂಘದ ಸರ್ವಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹನುಮಂತ್ ಜಿ ಯಳಸಂಗಿ ದಲಿತ ಸೇನೆಯ ರಾಜ್ಯಾಧ್ಯಕ್ಷರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ದಲಿತ ಸಾಹಿತಿಗಳಾದ ಮತ್ತು ಸಂಶೋಧನಾ ಬರಹಗಾರರಾದ ಡಾಕ್ಟರ್ ವಿಠ್ಠಲ್ ವಗ್ಗನ್ ಸವಿಧಾನ ಜಾಗೃತಿ ಕುರಿತು ಸುದೀರ್ಘವಾಗಿ ಮಾತನಾಡಿದರು ಅದೇ ರೀತಿಯಾಗಿ ಕಾರ್ಯಕ್ರಮದ ಅಧ್ಯಕ್ಷರಾದ ಹನುಮಂತ ಜಿ ಯಳಸಂಗಿ ಅವರು ಕೂಡ ಮಾತನಾಡಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರನ್ನು ಸುರೇಶ್ ಬಿಲ್ವಾಡ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಿವಶಾಂತ್ ಎಂ ಮುನ್ನಳ್ಳಿ, ವೀರಪ್ಪ, ಅದರಗುಂಚಿ ,ಚಿನ್ನಾಕಾಶಿ, ಸಂಗಣ್ಣ ಶಾಸ್ತ್ರಿ ,ಮಧು ಚಕ್ರವರ್ತಿ, ಮಂಜುಳಾ, ಲಕ್ಷ್ಮಣ್ ಡೊಂಗ್ರೆ, ಭೀಮಶ್ಯಾ ದಂಡಗುಂಡಕರ, ಸುರೇಶ್ ಬಿಲ್ವಾಡ್ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.