ತುಮಕೂರು.ಮೇ.08:ಕಳೆದ ಮಾರ್ಚ್ 9-10 ಮತ್ತು 11 ರಂದು ಒರಿಸ್ಸಾದ ಕಟಕ್ ನಗರದಲ್ಲಿ ನಡೆದ ಮೊದಲನೇಯ ರಾಷ್ಟ್ರೀಯ ಖೇಲೋ ಇಂಡಿಯಾ ಹೆಣ್ಣು ಮಕ್ಕಳ ಟೆಕ್ವಾಂಡೋ ಸ್ಪರ್ಧೆಯಲ್ಲಿ ತುಮಕೂರಿನ ವಾರಿರ್ಸ್ ಟೆಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ ಗೋಕುಲ್ ಅವರು ಪ್ರಥಮ ಬಹುಮಾನ ಪಡೆದು, ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕುಮಾರಿ ಲಕ್ಷ್ಮಿ ಗೋಕುಲ್ ಅವರ ಸಾಧನೆಯನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಂಜಾನೆ ಗೆಳೆಯರ ಬಳಗದವತಿಯಿಂದ ಗೌರವಿಸಿ,ಅಭಿನಂದಿಸಲಾಯಿತು.ಕು.ಲಕ್ಷ್ಮಿ ಗೋಕುಲ್ ಅವರ ಸಾಧನೆ ಕುರಿತು ಮಾತನಾಡಿದ ಕಬ್ಬಡಿ ತರಬೇತುದಾರರಾದ ಇಸ್ಮಾಯಿಲ್,ಖೇಲೋ ಇಂಡಿಯಾದಲ್ಲಿ ಮೂರು ವಿಭಾಗಗಳಲ್ಲಿದ್ದು ಖೇಲೋ ಇಂಡಿಯಾ ಯೂತ್ಗೇಮ್,ಖೇಲೋ ಇಂಡಿಯಾ ಸ್ಕೂಲ್ ಗೇಮ್,ಖೇಲೋ ಇಂಡಿಯೂ ಯೂನಿರ್ವಸಿಟಿ ಗೇಮ್ ಎಂದು ವಯಸ್ಸಿನ ಆಧಾರದಲ್ಲಿ ವಿಂಗಡಿಸಲಾಗಿದೆ.14 ವಷ,17 ವರ್ಷ, 19 ವರ್ಷ ಮತ್ತು 21 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ.ಕ್ರೀಡಾ ಚಟುವಟಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಮೆಡಲ್ ಮಾಡಿದ ಯುವಜನತೆಗೆ ಶೈಕ್ಷಣಿಕವಾಗಿ ಮೆಡಿಕಲ್ನಲ್ಲಿ ಮತ್ತು ಇಂಜಿನಿಯರಿoಗ್ನಲ್ಲಿ ಸ್ಪೋರ್ಟ್ಸ್ ಕೋಟಾ ಸಹ ಇದೆ.ಪ್ರತಿವರ್ಷ 15 ಜನ ಮೆಡಿಕಲ್ ಮತ್ತು 150ಕ್ಕೂ ಹೆಚ್ಚು ಜನ ಇಂಜಿನಿಯರಿoಗ್ ಪ್ರವೇಶವನ್ನು ಕ್ರೀಡಾ ವಿಭಾಗದಿಂದ ಪಡೆಯುತ್ತಿದ್ದಾರೆ.ಖೇಲೋ ಇಂಡಿಯಾ ಯೂತ್ಗೇಮ್ಸ್ನಲ್ಲಿ ಕು. ಲಕ್ಷ್ಮಿ ಗೋಕುಲ ಒಳ್ಳೆಯ ಪ್ರದರ್ಶನ ನೀಡಿ, ಚಿನ್ನದ ಪದಕ ಪಡೆದಿದ್ದಾರೆ. ಇವರಿಗೆ ತರಬೇತಿ ನೀಡಿದ ಜಗದೀಶ್ ಅವರಿಗೆ, ಹಾಗೂ ಇವರ ಕ್ರೀಡಾ ಸಾಧನೆಗೆ ಬೆನ್ನೆಲುಬಾಗಿ ನಿಂತ ಇವರ ತಂದೆ ಗೋಕುಲ್ ಮಂಜುನಾಥ್ ಅವರಿಗೂ ಕ್ರೀಡಾ ಇಲಾಖೆ ಹಾಗೂ ಮುಂಜಾನೆ ಗೆಳೆಯರ ಬಳಗದವತಿಯಿಂದ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕು. ಲಕ್ಷ್ಮಿ ಗೋಕುಲ್ ಅವರ ಕ್ರೀಡಾ ಸಾಧನೆ ಕುರಿತಂತೆ ಮುಂಜಾನೆ ಗೆಳೆಯರ ಬಳಗದ ಧನಿಯಕುಮಾರ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ ಅವರುಗಳು ಮಾತನಾಡಿ, ಅವರ ಮುಂದೆ ಮತ್ತಷ್ಟು ಸಾಧನೆಯ ಮೆಟ್ಟಿಲು ಏರಲೆಂದು ಶುಭ ಹಾರೈಸಿದರು.ಇದೇ ವೇಳೆ ಅಂತರಾಷ್ಟ್ರೀಯ ಕಬ್ಬಡಿ ತರಬೇತುದಾರರು ಹಾಗೂ ತುಮಕೂರು ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿ ಇಸ್ಮಾಯಿಲ್ ಅವರ ಹುಟ್ಟು ಹಬ್ಬದ ಅಂಗವಾಗಿ ಅವರಿಗೂ ಸಹ ಶುಭ ಕೋರಲಾಯಿತು.
ಈ ವೇಳೆ ತುಮಕೂರು ಪಿಟ್ನೇಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜಕುಮಾರ್, ಉಪಾಧ್ಯಕ್ಷ ಮಂಜುನಾಥ,ಕಾರ್ಯದರ್ಶಿ ರಾಮನಾಥ್, ಖಜಾಂಚಿ ವಾಸುದೇವ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Khelo India ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ
Leave a comment
Leave a comment