ತುಮಕೂರು: ಮಾನ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಸರ್ಕಾರದ ಮಂತ್ರಿಯೋ ಸಮುದಾಯದ ಮಂತ್ರಿಯೋ ಅವೈಜ್ಞಾನಿಕವಾದ ಎಜೆ ಸದಾಶಿವ ವರದಿಯನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವAತೆ ಸರ್ಕಾರಕ್ಕೆ ಒತ್ತಾಯಿಸುತ್ತಿರುವ ತಮ್ಮ ಸರ್ಕಾರದ ವಿರುದ್ಧವಾಗಿ ತಾವೇ ಹೋರಾಟ ಮಾಡುವಂತೆ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕುವಂತೆ ಹೋರಾಟಗಾರರಿಗೆ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಕೆ ಎಚ್ ಮುನಿಯಪ್ಪನವರ ಹೇಳಿಕೆ ಖಂಡನೀಯ ಎಂದು ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ರಾಜ್ಯಧ್ಯಕ್ಷ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್ ) ತಿಳಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಇವರು ಒಂದು ಗೌರವಸ್ಥಾನದಲ್ಲಿದ್ದು ಇಡೀ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಮಂತ್ರಿ ಸ್ಥಾನದಲ್ಲಿ ಕೂತು ಕೇವಲ ಒಂದು ಸಮುದಾಯದ ಪರ ಓಲೈಕೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಲಂಬಾಣಿ ಭೋವಿ ಕೊರಮ ಕೊರಚ ಇನ್ನಿತರ ಎಲ್ಲಾ ಸಮುದಾಯಗಳು ಕೂಡ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು. ಒಬ್ಬ ರಾಜ್ಯದ ಮಂತ್ರಿಯಾಗಿ ಎಲ್ಲಾ ಸಮುದಾಯದ ಹಿತವನ್ನು ಸಾಮಾಜಿಕ ಮತ್ತು ಆರ್ಥಿಕ ಶೈಕ್ಷಣಿಕ ನ್ಯಾಯಗಳನ್ನ ಕೊಡುವಂತ ಕೆಲಸ ಮಾಡಬೇಕು ಇವರು ಕೇವಲ ಒಂದು ಸಮುದಾಯದ ಪರ ಓಲೈಕೆ ರಾಜಕಾರಣಕ್ಕಾಗಿ ಮಾತನಾಡುವುದು ಶೋಚನಿಯ ಸಂಗತಿ. ಅದಾಗಿಯೂ ಕೂಡ ತಮ್ಮ ಸರ್ಕಾರದ ವಿರುದ್ಧವೇ ಹೋರಾಟದ ಎಚ್ಚರಿಕೆಗಳನ್ನು ನೀಡುತ್ತಿರುವ ಇಂಥವರು ಮಂತ್ರಿ ಸ್ಥಾನದಲ್ಲಿ ಕೂರಲು ನಾಲಾಯಕ್. ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಇಂಥವರನ್ನು ಮಂತ್ರಿ ಮಂಡಲದಿAದ ವಜಾಗೊಳಿಸಬೇಕು ಇವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕಾನೂನಿನ ಮೇಲೆ ಗೌರವ ಇದ್ದರೆ ಎಲ್ಲರಿಗೂ ಸಮಾನ ನ್ಯಾಯವನ್ನು ಕೊಡಿಸಲಿ ಇದಕ್ಕೆ ನಾವು ಬದ್ದರಿದ್ದೇವೆ ಎಂದಿದ್ದಾರೆ.
ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ತರತುರಿಯಲ್ಲಿ ಅವೈಜ್ಞಾನಿಕ ವರದಿ ಸದಾಶಿವ ಆಯೋಗದ ಹೆಸರಿನಲ್ಲಿ ಒಳ ಮೀಸಲಾತಿ ಎಂದು ಜಾರಿ ಮಾಡಲು ಹೊರಟಿತ್ತು ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಿದ್ದೇವೆ ಅವಜ್ಞಾನಿಕ ವರದಿ ಎಜೆ ಸದಾಶಿವ ಆಯೋಗವನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ ಸಚಿವರಿಗೆ ಶಾಸಕರಿಗೆ ಸೋಲಿನ ಪಾಠ ಈಗಾಗಲೇ ಆಗಿದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇವರ ಹೇಳಿಕೆಗಳಿಗೆ ತಕ್ಕಂತೆ ಲೋಕಸಭಾ ಚುನಾವಣೆಯಲ್ಲಿ ಇವರಿಗೂ ತಕ್ಕ ಪಾಠ ಕಲಿಸುತ್ತೇವೆ ಈ ಕೂಡಲೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಕೆ ಎಚ್ ಮುನಿಯಪ್ಪನವರನ್ನು ಮಂತ್ರಿಮAಡಲದಿAದ ವಜಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ರಾಜ್ಯಧ್ಯಕ್ಷ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್ ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕೆ ಎಚ್ ಮುನಿಯಪ್ಪನವರ ಹೇಳಿಕೆ ಖಂಡನೀಯ
Leave a comment
Leave a comment