ಕವಿರಾಜಮಾರ್ಗ ಕನ್ನಡ ಸಾಹಿತ್ಯಕ್ಕೆ ಬುನಾದಿ: ಬರಗೂರು ರಾಮಚಂದ್ರಪ್ಪ
ತುಮಕೂರು: ೧೨೬ ವರ್ಷಗಳ ಹಿಂದೆ ಕೆ. ಬಿ. ಪಾಠಕ್ ಅವರು ಕ್ರಮವಾಗಿ ಸಂಪಾದಿಸಿ, ಪರಿಷ್ಕರಿಸಿ ಹೊರ ತಂದ ಶ್ರೇಷ್ಠ ಮೀಮಾಂಸೆ ಕವಿರಾಜಮಾರ್ಗವು ಕನ್ನಡ ಸಾಹಿತ್ಯ ನೆಲೆಯನ್ನು ಕಟ್ಟಿಕೊಡುವ ಕೆಲಸವನ್ನು ಈಗಲೂ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ-೧೨೫’ ರಾಷ್ಟಿçÃಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಗ್ರಂಥ ಸಂಪಾದನೆ ಎನ್ನುವುದು ಯಾವುದೇ ಪ್ರಕಾರದ ಸಾಹಿತ್ಯ ನೆಲೆಯನ್ನು ಕಟ್ಟಿಕೊಡುವ ಕೆಲಸವಾಗಬೇಕು. ಕವಿರಾಜಮಾರ್ಗ ಕನ್ನಡ ಕಟ್ಟುವ, ಸಂಸ್ಕೃತದ ನೆಲೆಯಿಂದ ತನ್ನನ್ನು ವಿಭಜಿಸಿಕೊಂಡು, ಸಾಮಾಜಿಕ ಬಲಾಢ್ಯತೆಯಿಂದ ಹಳೆಗನ್ನಡದ ಓದನ್ನು ಕುಗ್ಗಿಸದೆ, ಪರಧರ್ಮ ಸಹಿಷ್ಣುತೆ, ಸಾಮಾಜಿಕ ಪರಂಪರೆಯನ್ನು ಸಾರುವ ಜನಸಾಮಾನ್ಯರ ಕೃತಿಯಾಗಿ, ತಾತ್ವಿಕ ಬೀಜ ಬಿತ್ತುವುದರ ಮೂಲಕ ಇಂದಿಗೂ ತನ್ನ ಸತ್ವಪ್ರಶಂಸೆಯನ್ನು ಸಾರುತ್ತಿದೆ ಎಂದು ತಿಳಿಸಿದರು.
ಕವಿರಾಜಮಾರ್ಗ ಕನ್ನಡ ಸಾಹಿತ್ಯಕ್ಕೆ ಬುನಾದಿ
Leave a comment
Leave a comment