ಕಲ್ಬುರ್ಗಿ ನಗರದಲ್ಲಿಂದು ಕಲ್ಬುರ್ಗಿ ನಗರ ಪೊಲೀಸ್ ವತಿಯಿಂದ 1964ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಎಂದು ಮರುನಾಮಕರಣವಾಗಿ ಇವತ್ತಿಗೆ 50 ವರ್ಷವಾಯಿತು ಅದರ ಅಂಗವಾಗಿ ಕರ್ನಾಟಕ ಪೊಲೀಸ್ ರನ್ 5ಕೆ ಫಿನಿಶರ್ ಡ್ರಗ್ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂದು ಬೆಳಗ್ಗೆ ಐವನ್ ಎ ಶಾಹಿ ಯಲ್ಲಿ 6.30 ಕ್ಕೆ ಕಲಬುರ್ಗಿ ನಗರ ಪೊಲೀಸ್ ಆಯುಕ್ತರಾದ ಆರ್ ಚೇತನ್ ಮತ್ತು ಕಲಬುರ್ಗಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹಾಕೈ ಅಕ್ಷಯ್ ಮಚೀಂದ್ರ ಅವರು 5 ಕಿ.ಮೀ ಮ್ಯಾರಥಾನ್ ಪೊಲೀಸ್ ಸಿಬ್ಬಂದಿಗಳೊಂದಿಗೆ ಓಟದ ಸ್ಪರ್ಧೆಗೆ ಚಾಲನೆ ನೀಡಿದರು.
ಈ ಸ್ಪರ್ಧೆಯಲ್ಲಿ ಪೊಲೀಸ್ ಅಧಿಕಾರಿಗಳು ,ಪೊಲೀಸ್ ಸಿಬ್ಬಂದಿ ,ಬಾಲಕ ಬಾಲಕಿಯರು, ಯುವಕ ಯುವತಿಯರು ,ಹಿರಿಯ ಪೊಲೀಸ್ ಅಧಿಕಾರಿಗಳು, ಸೇರಿದಂತೆ ಹಿರಿಯ ನಾಗರಿಕರು ಭಾಗವಹಿಸಿದ್ದರು.
ತದನಂತರ ಮಾಧ್ಯಮದ ರೊಂದಿಗೆ ಕಲ್ಬುರ್ಗಿ ಪೊಲೀಸ್ ಆಯುಕ್ತರಾದ ಚೇತನ್ ಆರ್ ಮಾತನಾಡುತ್ತಾ ಪೊಲೀಸರು ಮತ್ತು ಸಾರ್ವಜನಿಕರು ಜೊತೆ ಜೊತೆಯಾಗಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮ್ಯಾರಥಾನ್ ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಹಾಕೈ ಅಕ್ಷಯ್ ಮಚೀಂದ್ರ ಮಾಧ್ಯಮದವರಿಂದ ಮಾತನಾಡುತ್ತಾ ಕರ್ನಾಟಕ ಪೊಲೀಸ್ 1964 ರಲ್ಲಿ ಮರುನಾಮಕರಣವಾಗಿ 50 ವರ್ಷವಾಯಿತು ಈ ಸುವರ್ಣ ಮಹೋತ್ಸವದ ಅಂಗವಾಗಿ ಯುವಕರಲ್ಲಿ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಮತ್ತೆ ಫಿಟ್ ಇಂಡಿಯಾ ನಂತಹ ಸಂದೇಶ ಸಾರಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶುಭ ಹಾರೈಸಿದರು.
5 ಕಿ.ಮೀ ಮ್ಯಾರಥಾನ್ ನಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ದಾಳುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.