ಇಂದು ಬೆಳಗ್ಗೆ 6:00 ಗಂಟೆಗೆ ತುಮಕೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಇಲಾಖೆ 50 ವರ್ಷ ಪೂರೈಸಿದ ಪ್ರಯುಕ್ತ “ಕರ್ನಾಟಕ ಪೊಲೀಸ್ ರನ್- 5ಕೆ ‘ ಆಯೋಜಿಸಿದ್ದು,ಈ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ.ಜಯಂತ್ ರವರು ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಪಿ 12ನೇ ತುಕುಡಿ,ಡಿ.ಎ.ಆರ್ ಮತ್ತು ನಗರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು, 4ನೇ ಕರ್ನಾಟಕ ಎನ್.ಸಿ.ಸಿ ವಿದ್ಯಾರ್ಥಿಗಳು, ವಿದ್ಯಾವಾಹಿನಿ ಸಂಸ್ಥೆ, ಎಸ್.ಎಸ್.ಐ.ಟಿ, ಸಿದ್ದಗಂಗಾ ಕಾಲೇಜು, ಸರ್ವೋದಯ ಕಾಲೇಜು, ಜಿಲ್ಲಾ ಕ್ರೀಡಾ ಶಾಲೆ, ವಿವೇಕಾನಂದ ರೈಫಲ್ ಸಂಸ್ಥೆ, ವಿದ್ಯೂದಯ ಲಾ ಕಾಲೇಜು ಮತ್ತು ಎಸ್.ಐ.ಟಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಗಳಾದ ಶ್ರೀ ರಾಮಲಿಂಗೇಗೌಡ,ಜಿಲ್ಲಾ ನ್ಯಾಯಾಧೀಶರು, ಶ್ರೀ ಮುನಿರಾಜು, ಕೌಟುಂಬಿಕ ನ್ಯಾಯಾಧೀಶರು, ಶ್ರೀ ನಾಗರೆಡ್ಡಿ, ಜಿಲ್ಲಾ ನ್ಯಾಯಾಧೀಶರು, ಶ್ರೀ ಸುಬ್ರಹ್ಮಣ್ಯ, ಸಿ.ಜೆ.ಎಂ, ಮತ್ತು ಶ್ರೀ ಮಂಜುನಾಥ ಸಿ.ಜೆ.ಎಂ. ರವರುಗಳು ಭಾಗವಹಿಸಿದ್ದರು.
ಈ 5 ಕಿ.ಲೋ.ಮೀಟರ್ ಓಟದಲ್ಲಿ ಚಿಕ್ಕಣ್ಣ, ಜಿ.ಎಫ್.ಜಿ.ಸಿ, ಕುಣಿಗಲ್ ರವರು ಪ್ರಥಮ ಸ್ಥಾನ ಪಡೆದುಕೋಂಡರು
ಈ ಕಾರ್ಯಕ್ರಮದ ನೇತ್ರತ್ವವನ್ನು ಪೊಲೀಸ್ ಅಧೀಕ್ಷಕರಾದ ಕೆ.ವಿ. ಆಶೋಕ್ ಐಪಿಎಸ್,ರವರು ವಹಿಸಿದ್ದರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ. ಮರಿಯಪ್ಪ, ಅಬ್ದುಲ್ ಖಾದರ್, ಮತ್ತು ನಗರ ಡಿಎಸ್ಪಿ ಚಂದ್ರಶೇಖರ್ ರವರುಗಳು ಉಪಸ್ಥಿತಿತರಿದ್ದರು.