69ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ 3ನೇ ವರ್ಷದ ಗಣೇಷೋತ್ಸವ ಕಾರ್ಯಕ್ರಮವನ್ನು ತುಮಕೂರು ಮಂಡಿಪೇಟೆಯ ಮಾರಿಯಮ್ಮ ನಗರ ಸ್ಮಾರ್ಟ್ ಸಿಟಿ ವಸತಿ ಸಮುಚ್ಛಯದಲ್ಲಿ ಹಮ್ಮಿಕೊಳ್ಳಲಾಯಿತು. ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮವನ್ನು ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕರಾದ ಎ.ನರಸಿಂಹಮೂರ್ತಿ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ಕನ್ನಡ ಧ್ವಜಾಹರೋಣ ನೇರವೇರಿಸಿದರು.