ತುಮಕೂರು:ಕಾಂತರಾಜು ವರದಿ ಮತ್ತು ನ್ಯಾ ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪದೇ ಪದೇ ನಿರಾಕರಿಸುತ್ತಾ ಅವುಗಳ ವಂಚನೆ ಮಾಡಿ ಕೊಂಡು ಬಂದಿರುವ ಸರ್ಕಾರ ಗಳಾಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲಿ ಜಾತಿವಾರು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಗಳು ಇತ್ತು, ಅದನ್ನು ಸದಾಶಿವ ವರದಿ ಮುಖಾಂತರ ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸಮಾನವಾದ ಅವಕಾಶವನ್ನು ಕೊಡಲು ವರದಿಯನ್ನು ನೀಡಿದರು ಎಂದು ಬಹುಜನ ಸಮಾಜ ಪಾರ್ಟಿ ಪಕ್ಷದ ಜಿಲ್ಲಾ ಧ್ಯಕ್ಷ ರಾಜಸಿಂಹ ತಿಳಿಸಿದರು.
ಅವರು ನವಂಬರ್ ೨೧ರಂದು ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬಹುಜನ ಸಮಾಜ ಪಾರ್ಟಿ ಪಕ್ಷದ ವತಿಯಿಂದ ಪ್ರಧಾನ ಕಾರ್ಯದರ್ಶಿ ಸಣ್ಣಭೂತಣ್ಣ ಆರ್.ಬಿ ರವರ ನೇತೃತ್ವದಲ್ಲಿ ಕಾಂತರಾಜು ಆಯೋಗದ ವರದಿ ಮತ್ತು ನ್ಯಾ|| ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಮಾತನಾಡುತ್ತಿದ್ದರು.
ಬಹುಜನ ಸಮಾಜ ಪಾರ್ಟಿ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜಸಿಂಹ ರವರು ಮಾತನಾಡಿ ಅದನ್ನು ಜಾರಿಗೊಳಿಸಬೇಕು ಎಂದು ಒತ್ತಾಯ ಮಾಡುತ್ತಾ ಇದ್ದೇವೆ. ನಾಲ್ವಡಿ ಕೃಷ್ಣರಾಜ ರಂತಹ ರಾಜರನ್ನು ಇಡೀ ಪ್ರಪಂಚದಲ್ಲಿ ಕಾಣಲು ಸಾಧ್ಯವಿಲ್ಲ. ಅಂತಹವರು ಶೇಕಡ ೭೫ ಭಾಗ ರಿಸರ್ವೇಶನ್ ಅನ್ನು ಕೊಟ್ಟಾಗ ಒಕ್ಕಲಿಗರು ಮತ್ತು ಲಿಂಗಾಯಿತರು ಅದರ ಪ್ರತಿಫಲವನ್ನು ಪಡೆದವರು ಮತ್ತೆ ಹಿಂದುಳಿದ ಜಾತಿಯವರಿಗೆ ಪರಿಶಿಷ್ಟ ಜಾತಿಗಳಿಗೆ ಅವಕಾಶವನ್ನು ಮಾಡಿಕೊಡದೆ ವಿದ್ಯಾಭ್ಯಾಸ ಮತ್ತು ಉದ್ಯೋಗ ಗಳಲ್ಲಿ ದೊಡ್ಡ ವಂಚನೆ ಆಗಿರುವುದನ್ನು ನಾವು ಕಾಣುತ್ತಾ ಇದ್ದೇವೆ. ಈಗಿನ ಸರ್ಕಾರಗಳು ಎಲ್ಲಾ ವರದಿಯನ್ನು ನಿರಾಕರಿ ಸುತ್ತಾ ಬಂದಿದ್ದಾವೆ, ಈಗಿನ ಸರ್ಕಾರ ಕಾಂತರಾಜು ಆಯೋ ಗದ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲೇ ಬೇಕು. ಸಿದ್ದ ರಾಮಯ್ಯ ಅವರು ಭಾಗ್ಯಗಳಲ್ಲಿ ತೇಲಿ ಹೋದರೆ ಸಾಕಾಗು ವುದಿಲ್ಲ ಇಡೀ ಇತಿಹಾಸವನ್ನು ಬದಲಾಯಿಸು ವಂತಹ ಕೆಲಸವನ್ನು ಮಾಡ ಬೇಕು ಎಂದು ಮಾತನಾಡಿರು ತ್ತಾರೆ. ಈ ಪ್ರತಿಭಟನೆಯಲ್ಲಿ ಸುಮಾರು ೨೦-೨೫ ಜನ ಭಾಗವಹಿಸಿದ್ದರು.
ಕಾಂತರಾಜು-ನ್ಯಾ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
Leave a comment
Leave a comment