ನೀವು ಎಷ್ಟೇ ಪ್ರಯತ್ನ ಮಾಡಿದರು ನಾವು ಕುಗ್ಗುವುದಿಲ್ಲ ಎಂದು ಗುಡುಗಿದ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಪ್ರಧಾನ ಸಂಪಾದಕ ಮಲ್ಲಿಕಾರ್ಜುನ್ ಪಗಡೆ, ಸುಮಾರು ಎರಡು ದಿನಗಳ ಹಿಂದೆ ಕಲ್ಯಾಣ ಕರ್ನಾಟಕ ಸುದ್ದಿ ವಾಹಿನಿ ಫೇಸ್ಬುಕ್ ಪೇಜ್ ಅನ್ನು ಕೆಲವು ಕಿಡಿಗೇಡಿಗಳು ಹ್ಯಾಕ್ ಮಾಡಿ ಕೆಲವು ಕೆಟ್ಟ ಅಶ್ಲೀಲ ಫೋಟೋಗಳನ್ನು ಹಾರಿ ಬೀಡುತ್ತಿದ್ದಾರೆ, ಈ ವಿಷಯದ ಕುರಿತು ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ್ ಪಗಡೆ ಈಗಾಗಲೇ ಕಲ್ಬುರ್ಗಿ ಕ್ರೈಂ ಬ್ರಾಂಚ್ ನಲ್ಲಿ ದೂರು ಸಹ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ ಸುದ್ದಿ ವಾಹಿನಿಯ ಮೇಲಿರುವ ದ್ವೇಷದಿಂದ ಇಂತಹ ಕೆಲಸಗಳು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಈಗಾಗಲೇ ಸಾರ್ವಜನಿಕರಿಗೆ ಈ ಘಟನೆಯ ಕುರಿತು ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿದ್ದೇವೆ ಮತ್ತು ಸಾರ್ವಜನಿಕರು ನಮ್ಮನ್ನ ಬೆಂಬಲಿಸಿದ್ದು ತುಂಬಾ ಖುಷಿಯ ವಿಚಾರ ,ಇಂದು ಕಿಡಿಗೇಡಿಗಳು ನಮ್ಮೊಂದಿಗೆ ಮಾಡಿರುವ ಕೆಲಸ ಮುಂದೆ ಬೇರೆ ಸುದ್ದಿ ವಾಹಿನಿಯ ಜೊತೆಗೂ ಮಾಡಬಹುದು, ಇಂತಹ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕೆಂದರೆ ಗಟ್ಟಿ ಧ್ವನಿಯಿಂದ ನಾವೆಲ್ಲರೂ ವಿರೋಧಿಸಬೇಕಿದೆ ಎಂದರು, ಮತ್ತು ನೀವು ಎಷ್ಟೇ ನಮ್ಮನ್ನ ತುಳಿಯುವ ಕೆಲಸ ಮಾಡಿದರು ನಮ್ಮ ಕಾಯಕ ನಿಲ್ಲುವುದಿಲ್ಲ. ಮತ್ತು ನಿರಂತರವಾಗಿ ಸಾರ್ವಜನಿಕರಿಗಾಗಿ ಮತ್ತು ಸಾಮಾಜಿಕ ಕೆಲಸಗಳು ನಿಲ್ಲುವುದಿಲ್ಲ ಮತ್ತು ಇಂತಹ ಕಿಡಿಗೇಡಿಗಳನ್ನು ಕೂಡಲೇ ಪೊಲೀಸ್ ಇಲಾಖೆ ಮಟ್ಟ ಹಾಕಿ ಇಂಥ ಘಟನೆಗಳು ಮರುಕಳಿಸದಂತೆ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು…..