ಕಲ್ಯಾಣ ಕರ್ನಾಟಕ ಮತ್ತೆ ಕೈ ವಶ. ಈಶಾನ್ಯ ಪದವೀಧರ ಕ್ಷೆತ್ರದಲ್ಲಿ ಚಂದ್ರಶೇಖರ ಪಾಟೀಲ್ ಭರ್ಜರಿ ಜಯ.
ಕಲಬುರಗಿ : ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.
ಕ್ಷೇತ್ರದ ಹಾಲಿ ಸದಸ್ಯ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ ಪ್ರಥಮ ಪ್ರಾಶಸ್ತ್ಯದ ಮತದ ನಂತರ ನಿಗದಿಪಡಿಸಲಾದ ಕೋಟಾ 48,260 ಮತಗಳು ಎರಡನೇ ಪ್ರಾಶಸ್ತ್ಯದ ಮತ ಗುರಿ ತಲುಪಿದ ಹಿನ್ನೆಲೆಯಲ್ಲಿ ಪಾಟೀಲ 4651 ಮತಗಳ ಮುನ್ನಡೆಯೊಂದಿಗೆ ಪುನರಾಯ್ಕೆಯಾದರು.ಗೆಲವು ದೊರೆತ ನಂತರ ಮಾತನಾಡಿದ ಅವರು ಇದು ನನ್ನ ಗೆಲವು ಅಲ್ಲ ಈ ಗೆಲವು ಪ್ರಜ್ಞಾವಂತ ಪಧವಿದರರ ಶಿಕ್ಷಕರ ಗೆಲವು, ಮುಂದಿನ ದಿನಗಳಲ್ಲಿ ಪದವೀಧರರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕಾರ್ಯ ಮಾಡುತ್ತೇನೆ ಎಂದರು, ಮತ್ತು ನನ್ನ ಗೆಲುವಿಗೆ ಮಾರ್ಗದರ್ಶನ ಮಾಡಿದ ಶರಣಪ್ಪ ಮಟ್ಟುರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಇನ್ನು ಮತ ಎಣಿಕೆ ಕೇಂದ್ರದಲ್ಲಿ
ಸೋಲಿನ ಛಾಯೆ ಎದ್ದು ಕಾಣುತ್ತಿದ್ದಂತೆ ಮತ ಏಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಹೊರ ನಡೆದರು ನಂತರ ಮಾತನಾಡಿದ ಅವರು , ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಣ ಬಲದಿಂದ ಗೆದ್ದಿದೆ. ಆದರೆ ಪದವೀಧರ ಹಾಗೂ ಶಿಕ್ಷಕರ ಪರ ಹೋರಾಟ ಮುಂದುವರೆಯುತ್ತದೆ ಎಂದು ಸೋಲಿನ ಬಳಿಕ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಪಾಟೀಲರ
ಗೆಲುವಿನ ಹಿಂದೆ ಮಟ್ಟೂರ ಅವರು ಪ್ರಸ್ತುತ ಕಾಂಗ್ರೆಸ್ ಪುನಾರಾಯ್ಕೆಯಾಗುವಲ್ಲಿ ಆರು ತಿಂಗಳ ಹಿಂದೆಯೇ ಅಭ್ಯರ್ಥಿಯನ್ನು ಘೋಷಿಸಿದ್ದು, ಕ್ಷೇತ್ರದಾದ್ಯಂತ ಪ್ರಚಾರ ಮಾಡಲು ಸಮಯ ಸಿಕ್ಕಿತ್ತಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ ಮತ್ತು ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಸತತ ಜತೆಗೂಡಿ ವ್ಯಾಪಕ ಪ್ರಚಾರ ಕೈಗೊಂಡಿರುವುದು ಕಾಂಗ್ರೆಸ್ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.12 ಸಾವಿರ ಮತಗಳು ತಿರಸ್ಕೃತ: ಚಲಾವಣೆಯಾದ ಒಟ್ಟಾರೆ 1.09 ಲಕ್ಷ ಮತಗಳಲ್ಲಿ 12,513 ಮತಗಳು ತಿರಸ್ಕೃತಗೊಂಡಿರುವುದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ.