ಕಲ್ಪತರು ನಾಡಲ್ಲಿ Dragon Fruit ಬೆಳೆದು ಯಶಸ್ಸು ಕಂಡ ದಂಪತಿ, ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಗ್ರಾಮದ ಪದವೀಧರರಾದ ಗೀತಾ ಮತ್ತು ಅಂಜನ್ಕುಮಾರ್ ದಂಪತಿ ಡ್ರ್ಯಾಗನ್ ಫ್ರೂಟ್ ಎಂಬ ಬೆಳೆಗೆ ಕೈಹಾಕುವುದರ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್ಗೆ ಬಹು ಬೇಡಿಕೆ ಇರುವ ಹಿನ್ನೆಲೆಯಲ್ಲಿ ದಂಪತಿಗಳು ಈ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಈ ದಂಪತಿ ಪದವಿ ವಿದ್ಯಾಭ್ಯಾಸವನ್ನು ಮಾಡಿದ್ದು ಜೀವನಾಧಾರಕ್ಕೆ ತುಮಕೂರಿನಲ್ಲಿ ಸೂಪರ್ ಮಾರ್ಕೆಟ್ ವ್ಯವಹಾರ ಮಾಡಿಕೊಂಡಿದ್ದರು. ದೇಶದಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಸೂಪರ್ ಮಾರ್ಕೆಟ್ ಅನ್ನು ಮುಚ್ಚಿ ಹುಟ್ಟೂರಿನ ಕಡೆ ಬಂದು ವ್ಯವಸಾಯಕ್ಕೆ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ತೊಗರಿ, ಶೇಂಗಾ, ಸಜ್ಜೆಯನ್ನು ಬೆಳೆಯುತ್ತಿದ್ದರು. ಆದರೇ ಈ ದಂಪತಿಗಳು ತೋಟಗಾರಿಕೆ ಬೆಳೆಯಾದ ಡ್ರಾö್ಯಗನ್ ಫ್ರೂಟ್ ಬೆಳೆಯನ್ನು ಪ್ರಾರಂಭಿಸಿದಾಗ ಅಕ್ಕ-ಪಕ್ಕದ ಗ್ರಾಮಸ್ಥರು ಇದರ ಬದಲು ಅಡಿಕೆ ಅಥವಾ ತೆಂಗಿನ ಸಸಿಗಳನ್ನು ನಾಟಿ ಮಾಡಿದರೆ ಮುಂದೊAದು ದಿನ ಲಾಭ ಬರುತ್ತದೆ. ಈ ಸಸಿ ಕತ್ತಾಳೆ ರೀತಿಯಲ್ಲಿ ಇದೆ. ಇದು ಯಾವ ಬೆಳೆ ಕೊಡುತ್ತದೆ ಎಂದು ಟೀಕೆ ಮಾಡುತ್ತಿದ್ದರು. ಆದರೇ ಅವರ ಟೀಕೆಗಳಿಗೆ ಕಿವಿಕೊಡದೆ ಡ್ರಾö್ಯಗನ್ ಫ್ರೂಟ್ ಸಸಿಗಳನ್ನು ಬೆಳೆಯುವುದರ ಮೂಲಕ ಯಶಸ್ಸನ್ನು ಕಂಡಿದ್ದಾರೆ. ಫಲಾನುಭವಿ ಗೀತಾರವರು ಆದಿಶಕ್ತಿ ಸಂಜೀವಿನಿ ಒಕ್ಕೂಟದಲ್ಲಿ ಸದಸ್ಯರಾಗಿದ್ದು, ಸ್ವ-ಸಹಾಯ ಸಂಘದಲ್ಲಿ ಸಾಲ ಸೌಲಭ್ಯವನ್ನು ಪಡೆದು ನಂತರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಆರ್ಥಿಕ ನೆರವು ಸಹ ದೊರೆಯುತ್ತದೆಂದು ತಿಳಿದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರ ಸಹಕಾರದೊಂದಿಗೆ ಜಿಕೆವಿಕೆ ಹಿರೇಹಳ್ಳಿ ನರ್ಸರಿ ಕೇಂದ್ರದಿAದ ೧ ಸಸಿಗೆ ೪೦ ರೂ ನೀಡಿ ಒಟ್ಟು ೧೫೦೦ ಡ್ಯಾçಗನ್ ಫ್ರೂಟ್ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ತಮ್ಮ ಬೋರ್ವೆಲ್ನಲ್ಲಿ ಬರುವ ನೀರನ್ನೇ ಬಳಸಿಕೊಂಡು ಕಡಿಮೆ ತೇವಾಂಶದಲ್ಲೂ ಈ ಬೆಳೆಯನ್ನು ಬೆಳೆದು ಸಾಬೀತು ಪಡಿಸಿದ್ದಾರೆ. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಡ್ಯಾçಗನ್ ಫ್ರೂಟ್ ಬೆಳೆದು ಹೆಚ್ಚು ಆದಾಯ ಪಡೆಯಬಹುದಾಗಿದೆ. ಕಡಿಮೆ ತೇವಾಂಶವಿರುವ ಒಣ ಭೂಮಿ ಈ ಬೆಳೆಗೆ ಸೂಕ್ತವಾಗಿದೆ. ಇದು ಉಷ್ಣವಲಯದ ಹಣ್ಣಾಗಿದ್ದು ಗುಲಾಬಿ ಬಣ್ಣದಿಂದ ಕೂಡಿದೆ. ಸಂಪೂರ್ಣವಾಗಿ ತೋಟಕ್ಕೆ ಸಾವಯವಗೊಬ್ಬರವನ್ನು ಬಳಸುವುದರ ಮೂಲಕ ಸಾವಯವ ಕೃಷಿಯನ್ನು ಮಾಡಿದ್ದಾರೆ. ಮೊದಲ ಹಂತದಲ್ಲಿ ಬೆಳೆದಿರುವ ಡ್ಯಾçಗನ್ ಫ್ರೂಟ್ ಹಣ್ಣುಗಳನ್ನು ಮಾರಾಟ ಮಾಡಿ, ಮೊದಲ ವರ್ಷದ ಬೆಳಯಲ್ಲೇ ಒಂದು ಲಕ್ಷರೂ ನಿವ್ವಳ ಆದಾಯ ಪಡೆದಿದ್ದಾರೆ.