ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಕಲೋತ್ಸವ-೨೦೨೩’ ಅದ್ದೂರಿ ಚಾಲನೆ
ಪಠ್ಯದೊಂದಿಗೆ ಸಂಸ್ಖೃತಿಯ ಸಮ್ಮೀಳಿತವಾಗಲಿ : ಡಾ.ರವಿ ಪ್ರಕಾಶ್
ತುಮಕೂರು: ಪಠ್ಯದ ಜೊತೆಗೆ ಸಂಸ್ಕೃತಿಯ ಸಮ್ಮಿಳಿತವಾದಗಲೇ ವಿದ್ಯಾರ್ಥಿಗಳ ಅಧ್ಯಯನ ಪರಿಪೂರ್ಣವಾಗುವುದು ಎಂದು ಎಸ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲೆ ಮತ್ತು ಸಂಸೃತಿಯ ಪ್ರತೀಕವಾದ ಕಲೋತ್ಸವ-೨೦೨೩ ಅಂತರ್À ಕಾಲೇಜು ಸ್ಪರ್ಧೆಗಳಿಗೆ ಜ್ಯೋತಿ ಬೆಳಗುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ನಂತರ ಮಾತನಾಡಿದ ಅವರು, ಕಾಲೇಜು ಪಾಠಗಳ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಿ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ಕಲೋತ್ಸವ ಕಾರ್ಯಕ್ರಮ ಆಯೋಜಿಸಲಾಗುತಿತ್ತು, ಈ ವರ್ಷ ಬಹಳಷ್ಟು ಸದಾಭಿರುಚಿಯ ಕಲೆಗಳ ಸಮ್ಮಿಲನದೊಂದಿಗೆ ರೂಪುಗೊಳ್ಳುವ ಮೂಲಕ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಮುಖದಲ್ಲಿ ಹಸನಾದ ನಗು ತಂದಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಪಿಹೆಚ್ಡಿ ಪದವಿಗೆ ಭಾಜನರಾಗಿರುವ ಎಸ್ಎಸ್ ಐಟಿ ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು, ಮಧ್ಯಾಹ್ನದ ನಂತರ ವಿವಿಧ ಸ್ಪರ್ಧೆಗಳು ನಡೆದವು.
ವಿವಿಧ ಸ್ಪರ್ಧೆಗಳು: ಮೆರಗಿನ ಸಿದ್ಧತೆಯೊಂದಿಗೆ ನಡೆಯುತ್ತಿರುವ ‘ಕಲೋತ್ಸವ-೨೦೨೩’ ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ಮೆಹೆಂದಿ, ಚರ್ಚಾ, ಚಿತ್ರ ಬಿಡಿಸುವ ಸ್ಪರ್ಧೆ, ರಸಪ್ರಶ್ನೆ, ಮ್ಯಾಡ್ಆ್ಯಡ್, ಫ್ಯಾಷನ್ ಶೋ, ಮಿಮಿಕ್ರಿ, ಕಿರುಚಿತ್ರ, ಬೀದಿ ನಾಟಕ, ಭಾರತೀಯ ಶಾಸ್ತಿçÃಯ ಸಂಗೀತ, ಭರತನಾಟ್ಯ, ಫೋಟೊಗ್ರಫಿ ಸೇರಿದಂತೆ ಸುಮಾರು ೩೭ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಿಂಗಾರಗೊAಡ ಕ್ಯಾಂಪಸ್ :
ಮುಂಜಾನೆಯ ಮಂಜಿಗೆ ನೇಸರನ ಕಿರಣಗಳು ತಾಕಿದಾಗ ಹೊಳಪಿನಂದ ಹೆಚ್ಚಿದಂತೆ, ನಿತ್ಯ ಯೂನಿಫಾರ್ ತೊಟ್ಟು ಬರುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣ ಬಣ್ಣ ಸೀರೆ, ಪೈಜಾಮು, ಲಂಗ ದವಣೆ ಸೇರಿದಂತೆ ಸಂಪ್ರದಾಯಿಕ ಉಡುಗೆ ತೊಟ್ಟ ಮೊಗವನ್ನು ನೋಡಿದಾಗ ಸ್ವರ್ಗಲೋಕವೇ ಧರೆಗಿಳಿದ ಅನುಭವವಾಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಕಲಾ ವೈಭವದ ಮೆರುಗು ಜಿನುಗುತ್ತಿತ್ತು, ಹಚ್ಚ ಹಸಿರಿನ ಕಾಲೇಜು ಆವರಣ ಒಂದು ರೀತಿಯಲ್ಲಿ ಕಲಾ ಗ್ರಾಮದಂತೆ ಸಿಂಗಾರಗೊAಡಿತ್ತು. ಸಂಜೆಗತ್ತಲ ಸರದಿಗೆ ಇಂಬು ತಂದ ಕೃತಕ ಬೆಳಕಿನ ವಿದ್ಯುತ್ ದೀಪಗಳ ಭವ್ಯ ರಂಗಸಜ್ಜಿಕೆಯಲ್ಲಿ ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಖ್ಯಾತಿ ಪಡೆದ ಕಲಾವಿದರ ಸಮುಖದಲ್ಲಿ ವಿವಿಧ ನೃತ್ಯ ಪ್ರದರ್ಶನಗಳು ನೇರದ ಪ್ರೇಕ್ಷಕರ ಮನ ತಣಿಸಿದವು.
ಗಮನ ಸೆಳೆದ ಸಂಗೀತ ಶೋ(ಪ್ಲಾö್ಯಶ್ ಮಾಬ್)
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಕ್ಯಾಂಪಸ್ ಆರವಣದಲ್ಲಿ ವಿದ್ಯಾರ್ಥಿಗಳು ಹಾಡುಗಾರಿಕೆ, ನೃತ್ಯ ಪ್ರದರ್ಶನ ಮೂಲಕ ನೋಡುಗರ ಗಮನಸೆಳೆದರು, ವಿದ್ಯಾರ್ಥಿಯೋರ್ವ ತಮ್ಮ ಉಸಿರನ ಮೂಲಕವೇ ಸಂಗೀತ ಧ್ವನಿ ಸೃಷ್ಟಿಸುವ ಮೂಲಕ ಎಲ್ಲರ ಗಮನ ಸೆಳೆದದ್ದು ವಿಶೇಷ.