ಖತರ್ನಾಕ್ ಮನೆಗೆ ಕನ್ನ ಹಾಕುತ್ತಿದ್ದ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾದ ಕಲ್ಬುರ್ಗಿಯ ಪೊಲೀಸ್ ಇಲಾಖೆ .
ಕಲ್ಬುರ್ಗಿ ನಗರದಲ್ಲಿಂದು ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಮಾನ್ಯ ಆರ್. ಚೇತನ್ ಅವರಿಂದ ಸುದ್ದಿಗೋಷ್ಠಿ ಮಾಡಲಾಯಿತು
ಕಲ್ಬುರ್ಗಿ ನಗರದ ಸಾಯಿ ರಾಮ್ ನಗರ ಹಾಗೂ ನೃಪತುಂಗ ತುಂಗಾ ಕಾಲೋನಿ. ಹುಂಡೆಕರ್ ಕಾಲೋನಿ. ಭೋಪಾಲ್ ತೆಗನೂರ್ ಗ್ರಾಮದಲ್ಲಿ ಮನೆಗಳನ್ನು ಕಳ್ಳತನ ಮಾಡಿರುವ ಕಳ್ಳರ ಮೇಲೆ ಆರು ಪ್ರಕರಣಗಳಲ್ಲಿ ಸಿಕ್ಕಿರುವ ಒಟ್ಟು 72 ಬಂಗಾರದ ಆಭರಣಗಳು ಸುಮಾರು ಅಂದಾಜು 5,28,000 ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಸಾಮಾನುಗಳು ವಶಪಡಿಸಿಕೊಂಡು ಕಳ್ಳರನ್ನು ಬಂಧಿಸುವಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಹಾಗೂನಗರದ ಜಯನಗರ್ ನಿವಾಸಿ ಶ್ರೀಮತಿ ಆರತಿ ಗಂಡ ಮಧ್ವರಾಜ್ ಬಂಡಿ ಅವರ ಮನೆಯಿಂದ ಕಳ್ಳತನವಾಗಿದ್ದ ಕಾರು ಮಧ್ಯಪ್ರದೇಶದಲ್ಲಿ ಪತ್ತೆ.
ಶ್ರೀಮತಿ ಆರತಿ ಗಂಡ ಮಧ್ವರಾಜ್ ಬಂಡಿ ಅವರ ಮನೆಯಿಂದ 06 ಗ್ರಾಂ ಬಂಗಾರದ ತಾಳಿ ಗುಂಡುಗಳು ಮತ್ತು 2500 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು ಮಾರುತಿ ಸ್ವಿಫ್ಟ್ ಕಾರು ಕಳ್ಳತನವಾಗಿದೆ ಎಂದು ನೀಡಿದ ಸಾರಾಂಶದ ಮೇಲೆ ಎಂ.ಬಿ ನಗರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತಂಡವನ್ನು ರಚಿಸಿ ಮಾಹಿತಿ ಕಲೆಹಾಕಿ ಮಧ್ಯ ಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ಕಾರ್ ಪತ್ತೆ ಹಚ್ಚಿದ್ದು ಮುಂದಿನ ಕಾರ್ಯ ಜಾರಿಯಲ್ಲಿದೆ ಎಂದು ಮಾನ್ಯ ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.
ನಂತರ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸದರಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೋಲಿಸ್ ಆಯುಕ್ತರಾದ ಆರ್ ಚೇತನ್ ರವರು ಗೌರವಿಸಿ ಸಂತೋಷ ವ್ಯಕ್ತಪಡಿಸಿದರು..