ಶಾಸಕರ ನಿರ್ಲಕ್ಷದ ವಿರುದ್ದ ಗ್ರಾಮಸ್ಥರ ತೀವ್ರ ಆಕ್ರೋಶ
ಆಫ್ಜಲ್ಪುರ್ ತಾಲೂಕಿನ ಬಡದಾಳ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಅಗ್ರಹಿಸಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ, ಹಲುವು ದಿನಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಜನರ ಪ್ರಯಾಣಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಗ್ರಾಮಸ್ಥರು ಮಾನ್ಯ ಶಾಸಕರಿಗೆ ಆಗ್ರಹಿಸಿದರು, ಧರಣಿ ಸತ್ಯಾಗ್ರಹವನ್ನುದ್ದೇಶಿಷಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಹಾಂತೇಶ್ ಅತನನೂರ, ಕೂಡಲೇ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನ ಸರಿಪಡಿಸಬೇಕು ಎಂದ ಶಾಸಕ ಹಾಗೂ ಅಧಿಕಾರಿಗಳಿಗೆ ಆಗ್ರಹಿಸಿದರು, ಇನ್ನು ಪತ್ರಕರ್ತ ರಾಹುಲ್ ದೊಡ್ಮನಿ ಮಾತನಾಡಿ ನಾವು ಶಾಸಕ ಎಂ. ವೈ ಪಾಟೀಲ್ 3 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳುವ ಅವರು ನಮ್ಮ ಗ್ರಾಮಕ್ಕೆ ಎಷ್ಟು ಪಾಲು ಇದೆ ಅದ್ರಲ್ಲಿ ಎಂಬುದು ಬಹಿರಂಗ ಪಡಿಸಬೇಕು, ಕಳಪೆ ಮಟ್ಟದ ಕಾಮಗಾರಿ ಮಾಡಿರುವದು ಅಷ್ಟೇ ಅಲ್ಲದೆ ಬಳುರ್ಗಿ ಬಡದಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ 4, 5 ತಿಂಗಳು ಕಳೆದರು ಕೂಡ ಇನ್ನು ಪೂರ್ಣಗೊಂಡಿಲ್ಲ, ಕೂಡಲೇ ರಸ್ತೆ ಸರಿಪಡಿಸಬೇಕು ಒಂದು ವೇಳೆ ರಸ್ತೆ ಸರಿಪಡಿಸದೆ ಹೋದರೆ ನಮ್ಮ ಅನಿರ್ದಿಸ್ಟಾವಾದಿ ಧರಣಿ ಸತ್ಯಾಗ್ರಹ ನಿರಂತರವಾಗಿ ಕೈಗೊಳ್ಳಲಾಗುವದು ಎಂದರು.