ಬಂದ್ ಬಂದ್ ಕಲ್ಬುರ್ಗಿ ಬಂದ್ ಅಂಗಡಿಗಳು ಬಂದ್ ರಸ್ತೆಗಳು ಬಂದ್ ಟೈರ್ ಗಳಿಗೆ ಬೆಂಕಿ ಹಚ್ಚಿ ಬಿಸಿಲೂರಿನ ಭೀಮ ಅಭಿಮಾನಿಗಳ ಆಕ್ರೋಶದಿಂದ ಕಲಬುರ್ಗಿ ನಗರ ಕೆಲ ಗಂಟೆಗಳ ಕಾಲ ತಲ್ಲಣಗೊಂಡಿತ್ತು.
ಹೌದು ವೀಕ್ಷಕರೇ ಕಲ್ಬುರ್ಗಿ ಹೊರವಲಯದ ಕೋಟನೂರ್ ಡಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ
ಮೂರ್ತಿಗೆ ಅವಮಾನ ಮಾಡಿ ಅದರಲ್ಲಿ ಹೆಸರು ಬರೆದಿರುವ ಚೀಟಿ ಇಟ್ಟಿರುವ ಘಟನೆ ನಡೆದ ಹಿನ್ನೆಲೆಯಲ್ಲಿ ಕಲಬುರ್ಗಿ ಸಂಪೂರ್ಣವಾಗಿ ಬಂದ ಆಗಿದೆ.
ಡಾ. ಬಿ .ಆರ್ ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಬೆಳಿಗ್ಗೆ 9:30 ಗಂಟೆಗೆ ದಿಢೀರನೆ ಕಲ್ಬುರ್ಗಿ ನಗರದ ಪ್ರಮುಖ ವೃತ್ತಗಳಾದ ಸರ್ದಾರ್ ವಲ್ಲಬಾಯ್ ಪಟೇಲ್, ಜಗತ್ ಸರ್ಕಲ್ ,ರಾಮಂದಿರ ಬಳಿ ಇರುವ ವಾಲ್ಮೀಕಿ ವೃತ್ತ, ಹಿರಾಪುರ್ ಕ್ರಾಸ್ ,ಸೂಪರ್ ಮಾರ್ಕೆಟ್ ಎಲ್ಲಾ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಬಂದ್ ಮಾಡಿ ಟೈರಗಳಿಗೆ ಬೆಂಕಿ ಹಚ್ಚುವುದರ ಮುಖಾಂತರ ಜೈ ಭೀಮ ಅಭಿಮಾನಿಗಳು ಆಕ್ರೋಶ ಹೊರ ಹಾಕಿದರು. ಎಲ್ಲಾ ಮುಖ್ಯ ರಸ್ತೆಗಳು ಬಂದಾಗ ಹಿನ್ನೆಲೆಯಲ್ಲಿ ಕೆಲ ಹೊತ್ತು ರಸ್ತೆ ಉದ್ದಕ್ಕೂ ಕೆ.ಎಸ್.ಆರ್ಟಿಸಿ ಬಸ್ ಕಾರು ಜೀಪು ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬತ್ತು.
ತದನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಾದ ಫೌಜೀಯಾ ತರನ್ನುಂ ಜೈ ಭೀಮ್ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ಈ ಘಟನೆಗೆ ಕಾರ್ಣಿಭೂತರಾದ ಕಿಡಿಗೇಡಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತೆ ಅವಮಾನ ಮಾಡಿದ ಬಾಬಾ ಸಾಹೇಬರಮೂರ್ತಿ ಹೊಸದಾದ ಮೂರ್ತಿ ಸ್ಥಾಪಿಸಿ ಕೊಡುತ್ತೇವೆ ಎಂದರು .ಈ ಸಂದರ್ಭದಲ್ಲಿ ಡಿಸಿಪಿ ಕನ್ನಿಕಾ ಸಿಕ್ರೀವಾಲ್ ಕೂಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾರತೀಯ ಯುವ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕಟ್ಟಿಮನಿ ಮಾತನಾಡುತ್ತಾ ಬಾಬಾ ಸಾಹೇಬ್ ಮೂರ್ತಿ ಅವಮಾನ ಮಾಡಿದ ಕಿಡಿಗಳು 24 ಗಂಟೆಗಳಲ್ಲಿ ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಯುವ ಸೇನೆಯ ಪ್ರಧಾನ ಕಾರ್ಯದರ್ಶಿ ಗಣೇಶ್ ಕಟ್ಟಿಮನಿ ಗೌತಮ್ ಹದನೂರ, ಮಲ್ಲಿಕಾರ್ಜುನ ಬರ್ಮಾ ,ರವಿ ಬಮಾರ,ದತ್ತಾ, ಶಿವಕುಮಾರ್, ದಿಲೀಪ ಕಾಂಬಳೆ, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜೈ ಭೀಮ್ ಅಭಿಮಾನಿಗಳು ಉಪಸ್ಥಿತರಿದ್ದರು.