ಇಂದು ಮುಖ್ಯ ಕಲಬುರಗಿ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ZP CEO ಕಲ್ಬುರ್ಗಿ) ಇವರಿಗೆ AIKKMS ರೈತ ಸಂಘಟನೆಯಿಂದ ಹಲಕರ್ಟಿ ರೈತರ ಹಾಗೂ ಕೂಲಿ ಕಾರ್ಮಿಕರಿಗೆ ನರೇಗಾ ದಲ್ಲಿ ಆದ ಅನ್ಯಾವನ್ನು ಸರಿಪಡಿಸುವಂತೆ ಒತ್ತಾಯಿಸಲಾಯಿತು. ಅವರು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಆದೇಶ ನೀಡಿದರು. ಬೇಡಿಕೆಗಳನ್ನು ಕೂಡಲೇ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಗುಲ್ಬರ್ಗ ತಾಲೂಕ ಅಧ್ಯಕ್ಷರಾದ ವಿಶ್ವನಾಥ್ ಸಿಂಗೆ, ಜಿಲ್ಲಾ ಸಮಿತಿಯ ಸದಸ್ಯರಾದ ಭೀಮಶಂಕರ್ ಆಂದೋಲ ಚಿತ್ತಾಪುರ ತಾಲೂಕು ಕಾರ್ಯದರ್ಶಿಗಳಾದ ಶಿವಕುಮಾರ್ ಆಂದೋಲ ಹಾಗೂ ತಾಲೂಕ ಸಮಿತಿಯ ಸದಸ್ಯರಾದ ಭಿಮೂ ಮಟ್ನಳ್ಳಿ ಅವರನ್ನು ಒಳಗೊಂಡು ಗ್ರಾಮದ ರೈತರು ಉಪಸ್ಥಿತರಿದ್ದರು.
ಕಲ್ಬುರ್ಗಿ ವರದಿ ರಾಜಶೇಖರ ಎಸ್ ಮಾತೋಳಿ