ಮಹಿಳಾ ಹಾಸ್ಟಲ್ ನಲ್ಲಿ ಕ್ಯಾಮೆರಾ ಇಟ್ಟು ಸಿಕ್ಕಿಬಿದ್ದ ವ್ಯಕ್ತಿ
ಜೇವರ್ಗಿಯ ಶಾಂತನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟಲ್ ನಲ್ಲಿ ಕಾಮುಕ ಓರ್ವ ಕ್ಯಾಮೆರಾ ಅಳವಡಿಸಿದ ಘಟನೆ ಬುಧವಾರ ಬೆಳಕಿಗ್ಗೆ ಬಂದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಶಾಂತನಗರದಲ್ಲಿ ನಿವಾಸಿ ಸಲೀಮ್ (34) ಬಂಧಿತ ಆರೋಪಿ, ಕಾಮುಕ ವ್ಯಕ್ತಿಗೆ ಮೂರು ಮಕ್ಕಳಿದರೂ ಈ ಕೃತ್ಯ ನಡೆಸಿದ್ದಾನೆ ಎಂದು ಸ್ಥಳೀಯರು ಕೀಡಿಕಾರಿ ಬಲೋಳಿ ಮಾರುತ್ತಿರುದ್ದ ಎಂದು ತಿಳಿದುಬಂದಿದೆ.
ರಾತ್ರಿ ವೇಳೆ ಹಾಸ್ಟಲ್ ಗೊಡೆಯ ಪೈಪ್ ಮೂಲಕ ಕ್ಯಾಮೆರಾ ಅಳವಡಿಸಿದ ಎನ್ನಲಾಗುತ್ತಿದ್ದು, ಇಂದು ಬೆಳಿಗ್ಗೆ ಹಾಸ್ಟಲ್ ವಿದ್ಯಾರ್ಥಿನಿಯರು ಎಂದಿನಂತೆ ಸ್ನಾನಕ್ಕೆ ತೆರಳಿದ್ದಾಗ ಕ್ಯಾಮೆರಾ ಇಟ್ಟಿರುವುದು ಅನುಮಾನಗೊಂಡು ವಿದ್ಯಾರ್ಥಿನಿಯರು ತಕ್ಷಣ ಹಾಸ್ಟಲ್ ವಾರ್ಡನ್ ಗೆ ಮಾಹಿತಿ ನೀಡಿದ್ದಾರೆ.
ಕ್ಯಾಮೆರಾದ ಜಾಲವನ್ನು ಪತ್ತೆ ಹಚ್ಚಿಕೊಂಡು ಪಕ್ಕದ ಮನೆಯ ಸಲೀಮ್ ಎಂಬ ವ್ಯಕ್ತಿ ಈ ಕೃತ್ಯ ನಡೆಸಿರುವುದು ಗೊತ್ತಾಗಿದೆ. ಸ್ಥಳೀಯರು ಸೇರಿಕೊಂಡು ಸಲೀಮನ್ನು ಥಳಿಸುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಘಟನೆ ಕುರಿತು ಜೇವರ್ಗಿ ತಹಶೀಲ್ದಾರ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ನಂತರ ಆರೋಪಿ ಸಲೀಮ್ ಪೋಷಕರ ಮೂಲಕ ಜೇವರ್ಗಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.