ಕಲಬುರಗಿ : ಕೃಷಿ ಚಟುವಟಿಕೆಯಲ್ಲಿ ತೊಡಗಿದ ಮಹಿಳೆಯೋರ್ವಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತ ಪಟ್ಟಿರುವ ಧಾರುಣ ಘಟನೆ ಜೇವರ್ಗಿ ತಾಲೂಕಿನ ಬಳ್ಳೂಂಡಗಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಕೋಲಿ ಸಮಾಜದ ರೇಣುಕಾ
ಎಂಬುವವರಾಗಿದ್ದಾರೆ. ಮೃತರಿಗೆ ಇಬ್ಬರು ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ ಸೋಮವಾರ ಮದ್ಯಾಹ್ನ 1 ಗಂಟೆ 30 ರ ಸಮಯಕ್ಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಕ್ಕದಲ್ಲಿಯೇ ವಿದ್ಯುತ್ ತಂತಿ ಬಿದ್ದಿದ್ದು ಮತ್ತು ಅದರಿಂದ ವಿದ್ಯುತ್ ಪ್ರವಹಿಸಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ವಿದ್ಯುತ ತಂತಿ ತುಂಡಾಗಿ ಬಿದ್ದಿರುವ ಕುರಿತು ಜೇಸ್ಕಾಂ ಅಧಿಕಾರಿಗಳಿಗೆ ಸುಮಾರು ನಾಲ್ಕು ತಿಂಗಳು ಮುಂಚಿತವಾಗಿ ದೂರ ನೀಡಿದರು ಸಹ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ ನೀಡದೆ ನಿರ್ಲಕ್ಷವಹಿಸಿರುವದು ಇದೀಗ ಮಹಿಳೆ ಸಾವಿಗಿಡಾಗುವಂತೆ ಮಾಡಿದೆ, ಅದ್ಯಾಗೂ ಮಹಿಳೆ ಸಾವಿನ ನಂತರವು ಅಧಿಕಾರಿಗಳು ಬೇಜವಾಬ್ದಾರಿತನ ಮೆರೆದಿದ್ದು ಘಟನೆ ನಡೆದು ಹಲವು ಗಂಟೆಗಳಾದರೂ ಕೂಡಾ ಸ್ಥಳಕ್ಕೆ ಧಾವಿಸಿಲ್ಲ ಎಂದು ತಿಳಿದು ಬಂದಿದೆ, ಘಟನೆಯ ಮಾಹಿತಿ ಅರಿತ ಕರ್ನಾಟಕ ರಾಜ್ಯ ತಳವಾರ್ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಸರ್ದಾರ್ ರಾಯಪ್ಪ ಹಾಗೂ ಎಸ್ಟಿ ಹೋರಾಟ ಸಮಿತಿ ಜೇವರ್ಗಿ ತಾಲೂಕಾಧ್ಯಕ್ಷ ಅಶೋಕ್ ಕೊಂಕಿ, ಭೀಮರಾಯ ತಳವಾರ್ ಬೇಲೂರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು ಮತ್ತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಉದ್ದೇಶ ಪೂರ್ವಕವಾಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಅಧಿಕಾರಿಗಳು ಮಾಡುತ್ತಿದ್ದು, ಅಧಿಕಾರಿಗಳು ತಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುವದರಲ್ಲಿಯೇ ಮಗ್ನರಾಗಿದ್ದು ಘಟನೆಯಲ್ಲಿ ಸಾವಿಗಿಡಾದ ಮಹಿಳೆಯ ಕುಟುಂಬಕ್ಕೆ ಮತ್ತು ಅವಳ ಇಬ್ಬರು ಮಕ್ಕಳಿಗೆ ನ್ಯಾಯ ಕೊಡಿಸುವಂತ ಕಾರ್ಯಕ್ಕೆ ಯಾರು ಮುಂದಾಗಿಲ್ಲ ಇದು ಅತ್ಯಂತ ಖಂಡನೀಯ ಎಂದು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತ ಪಡಿಸಿದರು, ಹಲವು ದಿನಗಳ ಹಿಂದೆ ಮೃತ ಮಹಿಳೆಯ ಗಂಡನು ಕೂಡ ನಿಧನ ಹೊಂದಿದ್ದು ಇದೀಗ ಹೆಂಡತಿಯು ನಿಧನ ಹೊಂದಿದ್ದು ಇಡಿ ಕುಟುಂಬ ಅಕ್ಷರಶ್ ಬೀದಿಗೆ ಬಂದಂತಾಗಿದೆ. ಮೃತ ಮಹಿಳೆಯ ಈ ದುರ್ಘಟನೆಯನ್ನು ಕೇಲವು ಕಿಡಿಗೇಡಿಗಳು ರಾಜಕೀಯ ಮಾಡಿ ಹೋರಾಟಗಾರರನ್ನು ಹತ್ತಿಕ್ಕಿ, ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿರುವದು ಮತ್ತು ಗ್ರಾಮದ ಜನರ ದಿಕ್ಕು ತಪ್ಪಿಸಿ ಸಮಾಜದವರಿಗೆ ಅನ್ಯಾಯ ಮಾಡುವಂತ ಕೆಲಸ ಕೇಲವು ಕಾಣದ ಕೈಗಳು ಮಾಡುತ್ತಿದ್ದು ಈ ಬೆಳವಣಿಗೆ ಸರಿಯಲ್ಲ ಕೂಡಲೇ ಅಧಿಕಾರಿಗಳು ಮೃತ ಮಹಿಳೆಯ ಕುಟುಂಬಕೆ ಪರಿಹಾರ ವದಗಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು, ಒಂದು ವೇಳೆ ಪರಿಹಾರ ನೀಡದೆ ಹೋದರೆ ಹೋರಾಟದ ಸ್ವರೂಪ ಇನ್ನಷ್ಟು ಉಗ್ರವಾಗಿರುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು, ಪ್ರಕರಣ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ತನಿಖೆ ನಡೆಯುತ್ತಿದೆ. ಒಟ್ಟಾರೆಯಾಗಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಿ ಮೃತ ಮಹಿಳೆಯ ಕುಟುಂಬಕೆ ವಿದ್ಯುತ್ ಇಲಾಖೆ ವತಿಯಿಂದ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಾಹವಾಗಿದೆ.
Kalburgi jevargi ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಮಹಿಳೆ ಬಲಿ
Leave a comment
Leave a comment