ಕಲ್ಬುರ್ಗಿ ನಗರದಲ್ಲಿಂದು ಕಲ್ಬುರ್ಗಿ ಮಹಾನಗರ ಸಭೆ ಕಾರ್ಮಿಕರ ಸಂಘ ಕಲ್ಬುರ್ಗಿ ವತಿಯಿಂದ ಮಾನ್ಯ ಆಯುಕ್ತರು ಮಹಾನಗರ ಪಾಲಿಕೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪೌರಕಾರ್ಮಿಕರ ವೇತನವನ್ನು ಹಣದ ಕೊರತೆ ಇದೆ ಎಂದು ಆಗಸ್ಟ್ ತಿಂಗಳಿಂದ ವೇತನವನ್ನು ತಡೆಹಿಡಿದಿರುತ್ತಾರೆ.
ಪೌರಕಾರ್ಮಿಕರು ಬಡ ಕುಟುಂಬದವರಾಗಿದ್ದು ಮಹಾನಗರ ಪಾಲಿಕೆಯಿಂದ ಬರುವ ಮಿತವಾದ ವೇತನವೇ ಪೌರ ಕಾರ್ಮಿಕರ ಕುಟುಂಬಕ್ಕೆ ಆಧಾರವಾಗಿರುತ್ತದೆ.
ಮಹಾನಗರ ಪಾಲಿಕೆಯಿಂದ ಬರುವ ಮಿತವಾದ ಸಂಬಳವನ್ನೇ ನಂಬಿ ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೇವೆ.
ಆದರೆ ನಮ್ಮ ಸಂಬಳವನ್ನು ಸರಿಯಾಗಿ ಪಾವತಿಸುತ್ತಿಲ್ಲ.
ಇದರಿಂದ ನಾವುಗಳು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ…
ಈ ರೀತಿ ವೇತನ ಪಾವತಿ ಮಾಡಲು ವಿಳಂಬ ಮಾಡುವುದು ಕಾನೂನಿನ ವಿರುದ್ಧವಾಗಿದೆ.
ನಾವುಗಳು ಮಾಡುವ ಕೆಲಸ ಅತಿ ಅವಶ್ಯವಾದ ಕೆಲಸ ವಾದ್ದರಿಂದ ಮತ್ತು ಅದನ್ನು ನಿಲ್ಲಿಸುವುದು ಸರಿ ವಿಲ್ಲವೆಂದ. ನಾವುಗಳು ಕೆಲಸ ಮಾಡುತ್ತಿರುವುದನ್ನೇ ಒಂದು ಅಸ್ತ್ರವಾಗಿ ಬಳಸಿಕೊಂಡು ಈ ರೀತಿ ನಮಗೆ ತೊಂದರೆ ಕೊಡುವುದು ಸರಿಯಲ್ಲ .
ಆದ್ದರಿಂದ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿಕರು ತಮ್ಮ ಮನವಿಯ ಮೂಲಕ ಮಾನ್ಯ ಆಯುಕ್ತರಿಗೆ ಒತ್ತಾಯ ಮಾಡುತ್ತಿದ್ದೇವೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕಾಂತ್ ನಿಂಬಾಳ್ಕರ್ ಅವರು ಮಾತನಾಡಿ ಕೂಡಲೇ ಕಾರ್ಮಿಕರ ವೇತನ ಮಾಡುವಂತೆ ಆಯುಕ್ತರಿಗೆ ಒತ್ತಾಯಿಸಿದರು.
ವರದಿ: