ಕಲ್ಬುರ್ಗಿ ಜಿಲ್ಲೆಯ ಕಡಣಿ ಗ್ರಾಮದ ಯುವಕ ಬಸವರಾಜ ಬೆಳೆದು ಬಾಳ ಬೇಕಾದ ಬಸವರಾಜ ತಂದೆ ದಿ.ಸಪ್ಪಯ್ಯ ಹಿರೇಮಠ ತನ್ನ ಎರಡು ಕಿಡ್ನಿ ವೈಫಲ್ಯದಿಂದ ಸುಮಾರು 4 ವರ್ಷದಿಂದ ಬಳಲುತ್ತಿದ್ದಾನೆ.
ಹಡೆದ ತಾಯಿ ಸರಸ್ವತಿ ಕಡಣಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದು ಇವರಿಗೆ ಬಸವರಾಜ್ ಮತ್ತು ಇಬ್ಬರು ಸಹೋದರಿಯರು ಕೂಡ ಇದ್ದಾರೆ ಇವರದು ಬಹಳ ಬಡ ಕುಟುಂಬ ತಾಯಿ ಸರಸ್ವತಿ ತನ್ನ ಗಂಡನನ್ನು ಕಳೆದುಕೊಂಡು ಸುಮಾರು 13 ವರ್ಷವಾಯಿತು. ಬಹಳ ಕಷ್ಟದಲ್ಲಿಯೇ ತನ್ನ ಮೂರು ಮಕ್ಕಳೊಂದಿಗೆ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಾ ಇದ್ದಳು. ಸ್ವಲ್ಪ ದಿನಗಳ ನಂತರ ಅಂಗನವಾಡಿ ಕಾರ್ಯಕರ್ತೆ ಚಿಕ್ಕ ನೌಕರಿ ಸಿಗುತ್ತೆ ಹಾಗೆ ಹೀಗೆ ಜೀವನ ನಡೆಸುತ್ತಿರುವ ಸರಸ್ವತಿಗೆ ಅಂಗನವಾಡಿ ನೌಕರಿ ಆಸರೆ ಆಗುತ್ತದೆ.
ಅಷ್ಟರಲ್ಲಿ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯ ಬೇಕಾದರೆ 2020ರಲ್ಲಿ ಮಗ ಬಸವರಾಜನ ಎರಡು ಕಿಡ್ನಿ ವೈಫಲ್ಯ ಕಂಡುಬರುತ್ತದೆ. ತಾಯಿ ತನ್ನ ಎಲ್ಲಾ ಕಷ್ಟಗಳು ಈಗಲಾದರೂ ದೂರವಾಗಿವೆ ಎನ್ನುವಷ್ಟರಲ್ಲಿ ಮತ್ತೆ ಮಗನ ಎರಡು ಕಿಡ್ನಿ ಗಳು ವೈಪಲ್ಯ ವಾಗಿದೆ ಎಂಬ ಸುದ್ದಿ ಕೇಳಿ ತಾಯಿ ಪೂರ್ಣವಾಗಿ ಮತ್ತೆ ದಿನನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗುತ್ತದೆ. ಮಗನ ಜೀವನ ಉಳಿಸಿಕೊಳ್ಳುವ ಹೋರಾಟ ಪ್ರಾರಂಭವಾಗುತ್ತದೆ.
ಸರಸ್ವತಿ ಮಗನ ಪ್ರಾಣ ಉಳಿಸಲು 4 ವರ್ಷದಿಂದ ಸಾಕಷ್ಟು ಸಾಲ ಸೂಲ ಮಾಡಿ ತನ್ನ ಮಗನನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾಳೆ ಆದರೆ ತಾಯಿಗೆ ಮಗನ ಆಸ್ಪತ್ರೆಯ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಗನ ಆಸ್ಪತ್ರೆಯ ಹಣ ಕಟ್ಟಲು ಆಗುತ್ತಿಲ್ಲ ಹಾಗೆ ತನ್ನ ಉಳಿದ ಎರಡು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ಆಗುತ್ತಿಲ್ಲ ಆದ್ದರಿಂದ ಆ ತಾಯಿಯ ಆಸೆ ಒಂದೇ ತನ್ನ ಮಗನನ್ನು ಹೇಗಾದರೂ ಮಾಡಿ ಬದುಕಿಸಿಕೊಳ್ಳಬೇಕು ನನ್ನ ಎರಡು ಕಿಡ್ನಿ ಹಾಕಿಯಾದರೂ ಹೇಗಾದರೂ ಮಾಡಿ ನನ್ನ ಮಗನನ್ನು ಬದುಕಿಸಿ ಕೊಳ್ಳಲು ತಾಯಿ ಪರದಾಡುತ್ತಿದ್ದಾಳೆ. ಈ ತಾಯಿಯ ಕಷ್ಟದಲ್ಲಿ ಕರ್ನಾಟಕದ ಜನತೆ ತಮ್ಮ ತನು ಮನದಿಂದ ಸಹಾಯ ಮಾಡುವವರಿದ್ದರೆ A/C 60125233765, IFC Code:-MAHB0000425, Gulbarga ಈ ಬ್ಯಾಂಕ್ ಖಾತೆಗೆ ಅಥವಾ 9686183099/8884583532ಈ ದೂರವಾಣಿ ಸಂಖ್ಯೆಗೆ ಫೋನ್ ಪೇ ಮಾಡುವುದರ ಮುಖಾಂತರ ಸಹಾಯ ಮಾಡಬಹುದಾಗಿದೆ.