ಸೋಮಾರಿ ಸಿದ್ದ ಎಂದಿರುವ ಪ್ರತಾಪ ಸಿಂಹ ವಿರುದ್ದ ಮೈಸೂರಿನಲ್ಲಿ ದೂರು ದಾಖಲಾದ ವಿಚಾರ,
ಸಾರ್ವಜನಿಕ ಬದುಕಿನಲ್ಲಿ ಇದ್ದವರು ಬಹಳ ಸಂಯಮದಿಂದ ಮಾತನಾಡುವುದು ರೂಢಿ ಮಾಡಿಕೊಳ್ಳಬೇಕು.
ಲಕ್ಷಾಂತರ ಜನರನ್ನು ನಾವು ಪ್ರತಿನಿಧಿಸುತ್ತೇವೆ, ನಮ್ಮ ಮಾತುಗಳು ಮಾದರಿಯಾಗಬೇಕು.
ಸಾರ್ವಜನಿಕ ಬದುಕಿನಲ್ಲಿದ್ದವರು ಎಚ್ಚರಿಕೆಯಿಂದ ಮಾತನಾಡುವುದು ಅಗತ್ಯ.
ಯಾರನ್ನೇ ಆಗಲಿ ತೆಗಳುವುದಾಗಲಿ, ಮಾತನಾಡುವುದಾಗಲಿ ಸೂಕ್ಷ್ಮತೆ ಅಳವಡಿಸಿಕೊಳ್ಳಬೇಕು.
ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ಅವ್ಯವಹಾರ ಆಗಿದೆ ಎನ್ನುವ ಯತ್ನಾಳ ಹೇಳಿಕೆ ವಿಚಾರ,
ನಾವು ನಾಲ್ಕು ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ ಎಂದುಕೊಂಡಿದ್ದೇವು.
ನಮ್ಮ ಅನಿಸಿಕೆಯಲ್ಲಿ ತಪ್ಪಾಗಿದೆ.. ನಾಲ್ಕು ಸಾವಿರ ಕೋಟಿ ಅಲ್ಲ ನಲವತ್ತು ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ ಎನ್ನುವುದು ನಮಗೂ ಈಗ ಗೊತ್ತಾಗಿದೆ.
ನಮ್ಮ ಆರೋಪಕ್ಕೆ ಯತ್ನಾಳ ಹೇಳಿಕೆ ಶಕ್ತಿ ಕೊಟ್ಟಂತಾಗಿದೆ.
ಈ ಹಗರಣದ ಬಗ್ಗೆ ನಾವು ನ್ಯಾಯಾಂಗ ತನಿಖೆಗೆ ವಹಿಸಿದ್ದೇವೆ.
ತನಿಖೆ ಪೂರ್ಣಗೊಂಡು ವರದಿ ಬಂದ ನಂತರ ಮುಂದಿನ ಕ್ರಮ.
ಕಾಂಗ್ರೆಸ್ ಸಹ ಯಡಿಯೂರಪ್ಪ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ ಎನ್ನುವ ಯತ್ನಾಳ ಹೇಳಿಕೆಗೆ ತಿರುಗೇಟು,
ಯತ್ನಾಳ ತಮ್ಮ ಮಾತಿನ ಮೊದಲಾರ್ಧ ಸತ್ಯ ಮಾತನಾಡಿದ್ದಾರೆ.
ಕೊನೆಯಾರ್ಧ ಮಾತು ಸತ್ಯದಿಂದ ಕೂಡಿಲ್ಲ.
ನಾವು ಯಾರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡುವ ಪ್ರಶ್ನೇಯೇ ಇಲ್ಲ.
ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಹೋರಾಟ ವಿಚಾರ,
ಕನ್ನಡ ಪರ ಸಂಘಟನೆಗಳು ಈ ವಿಚಾರಕ್ಕೆ ಪ್ರತಿಭಟನೆ ನಡೆಸುತ್ತಿವೆ.
ಈ ಹಿಂದಿನ ಎಲ್ಲಾ ಸರಕಾರಗಳೂ ಕನ್ನಡದಲ್ಲೇ ಆಡಳಿತ ನಡೆಸಿವೆ.. ಈಗ ನಮ್ಮ ಸರಕಾರವೂ ಕನ್ನಡದಲ್ಲೇ ಆಡಳಿತ ನಡೆಸುತ್ತಿದೆ.
ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳಿಗೆ ಆಧ್ಯತೆ ಇದೆ.
ಆದ್ರೆ ಹೊರಗಿನಿಂದ ಬರುವವರಿಗೆ ಕನ್ನಡ ಗೊತ್ತಾಗೋದಿಲ್ಲ ಹಾಗಾಗಿ ಇಂಗ್ಲೀಷನಲ್ಲೂ ಬರೆಯಬೇಕಾಗುತ್ತದೆ.
ನಾವೂ ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷೆಯಲ್ಲಿಯೇ ಬೋರ್ಡಗಳಿದ್ದರೆ ನಮಗೆ ಓದಲು ಕಷ್ಟ ಆಗೋದಿಲ್ವಾ ?
ನಾವು ಕನ್ನಡವನ್ನು ಅತಿ ಹೆಚ್ಚು ಗೌರವಿಸ್ತೇವೆ.. ಕನ್ನಡ ಭಾಷೆಯ ಬೋರ್ಡ ಬರೆದು ಬೇರೆ ಬೋರ್ಡ ಸಹ ಬರೆಯಿರಿ ಅಂತ ಹೇಳಬಹುದು.
PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಾಜಿ ಸಿಎಂ HDK ಸೇರಿ ಹಲವರಿಗೆ ನೋಟಿಸ್ ವಿಚಾರ,
PSI ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ತನಿಖೆಗೆ ನ್ಯಾ. ವೀರಪ್ಪ ಸಮಿತಿಗೆ ವಹಿಸಿದ್ದೇವೆ.
ಅವರಿಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಅವರು ಕೆಲವರಿಗೆ ನೋಟಿಸ್ ಕೊಟ್ಟು ಕರೆದಿದ್ದಾರೆ.
ಅವರಿಗೆ ಯಾವ ರೀತಿಯ ಮಾಹಿತಿ ಸಿಕ್ಕಿದೆಯೋ ನಮಗೆ ಗೊತ್ತಿಲ್ಲ.
PSI ಅಕ್ರಮದಲ್ಲಿ ಭಾಹಿಯಾದವ ಹಲವರ ವಿರುದ್ದ ಕೋಕಾ ಜಾರಿ ವಿಚಾರ,
ಸದ್ಯ ಕೋಕಾ ಜಾರಿ ಮಾಡಿದ್ದೇವೆ.. ಅಗತ್ಯ ಅನ್ನಿಸಿದ್ರೆ ಅಂತಹವರ ವಿರುದ್ದ ಕಾನೂನು ಜಾರಿ ಮಾಡುವ ಬಗ್ಗೆ ಚಿಂತಿಸುತ್ತೇವೆ.
ನ್ಯಾ.ವೀರಪ್ಪ ಸಮಿತಿ ವರದಿ ಕೈ ಸೇರಿದ ನಂತರ ಹೊಸ ಕಾನೂನಿನ ಅಗತ್ಯ ಇದ್ರೆ ಮಾಡ್ತೆವೆ.
KEA ಪರೀಕ್ಷೆ ಕಲಬುರಗಿಯಲ್ಲಿ ಬಿಟ್ಟು ಬೆಂಗಳೂರಿನಲ್ಲಿ ನಡೆಸಿರುವ ವಿಚಾರ.
ಮುಂದಿನ ದಿನಗಳಲ್ಲಿ ಸಾಕಷ್ಟು ಬಿಗಿ ಕ್ರಮದೊಂದಿಗೆ ಕಲಬುರಗಿಯಲ್ಲಿಯೂ ಪರೀಕ್ಷೆ ನಡೆಸಲಾಗುವುದು.