ಸಂಗಾಪೂರ ಗ್ರಾಮದಲ್ಲಿ ಅಕ್ರಮ ಗಾಂಜಾ ವಶ : ಓರ್ವನ ಬಂಧನ
ಚಿಂಚೋಳಿ: ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿದ ಘಟನೆ ಬುಧವಾರ ಜರುಗಿದೆ.
ಕುಂಚಾವರಂ ಗಡಿ ಗ್ರಾಮವಾದ ಸಂಗಾಪೂರ ಗ್ರಾಮದ ನಿವಾಸಿ ರೈತ ವಿನೋದ ಪಾಂಡು ರಾಠೋಡ ಎಂಬುವವರು ಸರ್ವೇ ನಂ. 1 ರ ಹೊಲದಲ್ಲಿ ತೊಗರಿ ಬೆಳೆ ಸಾಲಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದರು.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಧಿಕ್ಷಕ ವಿಜಯಕುಮಾರ ರಾಂಪೂರೆ, ಚಿತ್ತಾಪೂರ ಉಪ ವಿಭಾಗ ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬಿ.ಬೇಲೂರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 50 ಸಾವಿರ ಬೆಲೆ ಬಾಳುವ 6.9 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.