ಕಲಬುರಗಿ:ಹೊರವಲಯದಲ್ಲಿರುವ ಭೀಮಳ್ಳಿ ಗ್ರಾಮದ ಬಳಿ ವ್ಯಕ್ತಿಯೋರ್ವನನ್ನು ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದಂತಹ ಘಟನೆ ನಡೆದಿದೆ.
ಮಶಾಕ್ ಮಕ್ಕಸ್(40) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮಶಾಕ್ ನನ್ನು ಹಳೆಯ ವೈಷಮ್ಯದ ಹಿನ್ನಲೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.ಮೃತ ದೇಹವನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ರವನಿಸಲಾಗಿದ್ದು. ಈ ಕುರಿತು ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ