ಕಲಬುರಗಿ ಜಿಲ್ಲೆಗೆ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ.
ನಾಟಿಕಾರಗೆ ಉಪವಾಸ ಸತ್ಯಾಗ್ರಹ ಕೈಬಿಡುವಂತೆ DC ಮನವಿ.
ಎಸ್ ವೀಕ್ಷಕರೇ
ಭೀಮಾ ನದಿಗೆ ನೀರು ಹರೀಸುವಂತೆ ಶಿವಕುಮಾರ್ ನಾಟಿಕಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಇಂದು ಕಲಬುರಗಿ ಜಿಲ್ಲಾಧಿಕಾರಿ ಭೇಟಿ ನೀಡಿದರು. ತದನಂತರ ಮಾತನಾಡಿದ ಅವರು ಈಗಾಗಲೇ ನಾರಾಯಣಪುರ ಜಲಾಶಯ ದಿಂದ 1ಟಿಎಂಸಿ ನೂರು ಬಿಡಿಸಲು ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದು ಅದಕ್ಕೆ ಸಂಬಂಧ ಪಟ್ಟಂತೆ ಚುನಾಯಿತ ಪ್ರತಿನಿಧಿಗಳು ಚರ್ಚೆ ಮಾಡ್ತಿದ್ದಾರೆ ಎಂದರು ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳುತ್ತೇ ಎಂದರು ಹಾಗೂ ಶಿವಕುಮಾರ್ ನಾಟಿಕಾರ್ ಅವರು ದಿಟ್ಟ ಹೋರಾಟಗಾರರಾಗಿದ್ದು ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್.ಪಿ ಹಾಕೈ ಅಕ್ಷಯ್ ಮಚೀಂದ್ರ,ತಾಲೂಕು ದಂಡಾಧಿಕಾರಿ ಸಂಜೀವಕುಮಾರ್ ದಾಸರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು