ಕಲ್ಬುರ್ಗಿ ನಗರದ ಎಸ್ ಎಂ ಪಂಡಿತರಂಗ ಮಂದಿರದಲ್ಲಿ ಯುಗಯುಗಗಳೇ ಸಾಗಲಿ ಅಭಿಮಾನಿಗಳ ಪ್ರೀತಿ ಶಾಶ್ವತ ಸಾಹಸಸಿಂಹ ಕರ್ನಾಟಕ ಸುಪುತ್ರ ಅಭಿನವ ಭಾರ್ಗವ ಡಾ// ವಿಷ್ಣುವರ್ಧನ್ ರವರ 73ನೇ ಜಯಂತೋತ್ಸವದ ಅಂಗವಾಗಿ ಈ ಕಾರ್ಯಕ್ರಮಕ್ಕೆ ಜೂನಿಯರ್ ವಿಷ್ಣುವರ್ಧನ್ ಜೈ ಶ್ರೀರಾಜ್ ಬೆಂಗಳೂರು ವತಿಯಿಂದ ವಿಷ್ಣು ಸವಿನೆನಪು ರಸಮಂಜರಿ ಕಾರ್ಯಕ್ರಮ ಮತ್ತು ಪೊಲೀಸ್, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಡಾ. ವಿಷ್ಣುವರ್ಧನ್ ಸೇವಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಭರತನಾಟ್ಯ ವಿಷ್ಣು ದಾದಾ ರವರ ಇಷ್ಟವಾದ ಹಾಡುಗಳ ಮುಖಾಂತರ ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆಯನ್ನು ಉದ್ದಿಮೆದಾರರಾದ ಮುನ್ನಾಭಾಯಿ ಧಾರವಾಡ ಮೋಟರ್ಸ್ ಕಲಬುರ್ಗಿ ಇವರು
ನೆರವೇರಿಸಿದರು.ತದನಂತರ ಈ ಕಾರ್ಯಕ್ರಮದ ಕೇಂದ್ರಬಿಂದು ಆಗಿರ್ತಕ್ಕಂತಹ ಡಾಕ್ಟರ್ ವಿಷ್ಣು ದಾದಾ ರವರ ಭಾವಚಿತ್ರಕ್ಕೆ ಶಿವಕಾಂತ್ ಮಹಾಜನ್ ಮತ್ತು ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿದಂತಹ ವಿಷ್ಣು ದಾದರವರ ಆಪ್ತಮಿತ್ರರಾದ ಖ್ಯಾತ ಚಲಚಿತ್ರದ ಹಿರಿಯ ನಟರಾಗಿರ್ತಕ್ಕಂತ ರಮೇಶ್ ಭಟ್ ಅವರ ಮತ್ತು ವೇದಿಕೆ ಮೇಲಿನ ಗಣ್ಯ ಮಾನ್ಯರು ಅತಿಥಿಗಳು ಸೇರಿ ಸಾಹಸಸಿಂಹ ವಿಷ್ಣು ವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.ಈ ಕಾರ್ಯಕ್ರಮದ ವಿಷ್ಣುಸೇನೆ ಅಧ್ಯಕ್ಷರಾಗಿರತಕ್ಕಂತ ಸಂತೋಷ ಶಾಕಾಪೂರ ಅವರ ನೇತೃತ್ವ ವಹಿಸಿದ್ದರು. ಮತ್ತು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನೀಲಕಂಠರ ಮೂಲ ಕಾಂಗ್ರೆಸ್ ಮುಖಂಡರು ವಿದ್ಯಾಸಾಗರ್ ಶಾಬಾದಿ ಪ್ರವೀಣ್ ತೆಗನೂರ್ ,ವೀರೇಶ್ ಬಿರಾದಾರ್ ,ಮಲ್ಲಿನಾಥ್ , ಇನ್ಮದಾರ, ಶ್ರೀಕಾಂತ್ ಗಂಗಾ ಅವಿನಾಶ್ ಕುಲಕರ್ಣಿ, ಅಶೋಕ್ ಪಟ್ಟಣಶೆಟ್ಟಿ ,ಶಂಕರ್ ಗೌಡ ಪಾಟೀಲ್, ಶಿವಾಜಿ ಮಲ್ಲಿನಾಥ್ ಮತ್ತೀತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.ಇನ್ನು ಈ ಕಾರ್ಯಕ್ರಮದ ನಿರೂಪಣೆಯನ್ನು ಆರ್.ಜೆ ಮಂಜುನಾಯತ ಅವರು ಅಚ್ಚು ಪಟ್ಟಾಗಿ ನಿರೂಪಿಸಿದರು .ಹಾಗೆ ಮೂವಿ ಮೆಲೋಡಿಸ್ ಆರ್ಕೆಸ್ಟ್ರ ವತಿಯಿಂದ ಸುಂದರವಾದ ವಿಷ್ಣುದಾದ ರವರ ಹಾಡುಗಳು ಮುಖಾಂತರ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲಾ ಪ್ರೇಕ್ಷಕರನ್ನು ಮನರಂಜಿಸಿದರು.ತದನಂತರ ಡಾಕ್ಟರ್ ವಿಷ್ಣುವರ್ಧನ್ ಅವರ ಸವಿನೆನಪು ಕಾರ್ಯಕ್ರಮ ದ ಗೌರವಾಧ್ಯಕ್ಷತೆ ವಹಿಸಿದ ಖ್ಯಾತ ಚಲನಚಿತ್ರ ನಟರು ಆಗಿರತಕ್ಕಂತ ರಮೇಶ್ ಭಟ್ಟರವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಹಾಪುರುಷ ಮಹಾನ್ ವ್ಯಕ್ತಿಯ ಜಯಂತೋತ್ಸವಕ್ಕೆ ದೊಡ್ಡ ರಂಗಮಂದಿರದಲ್ಲಿ ಕಡಿಮೆ ಜನ ಆಗಮಿಸಿದನ್ನು ಕಂಡು ಬೇಸರ ವ್ಯಕ್ತಪಡಿಸಿದರು . ಕಾರ್ಯಕ್ರಮದ ಆಯೋಜನೆ ಮಾಡಿರುವವರ ಗುರಿ ಉದ್ದೇಶದ ಕುರಿತು ವಿಷ್ಣು ವರ್ಧನವರ ಜೊತೆ ತಾವು ಕಳೆದ ದಿನಗಳ ಬಗ್ಗೆ ಅವರಲ್ಲಿರುವ ಸದ್ಗುಣಗಳ ಬಗ್ಗೆ ಮತ್ತು ಮುಂದಿನ 74ನೇ ಹುಟ್ಟು ಹಬ್ಬದ ದಿನದಂದು ಸಾಮಾನ್ಯ ಜನ ಆಗಿರ್ತಕ್ಕಂತ ಆಟೋ ಚಾಲಕರನ್ನು ಕೂಲಿ ಕಾರ್ಮಿಕರನ್ನು ಸನ್ಮಾನಿಸುವ ಕೆಲಸ ಆಗಲಿ ಎಂದು ಮಾತನಾಡಿದರು.ತದನಂತರ ಜೂನಿಯರ್ ವಿಷ್ಣು ರವರು ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ಕಾರ್ಯಕ್ರಮದ ನೇತೃತ್ವಯಿಸಿದ ಸಂತೋಷ ಶಾಕಾಪುರ ಅವರ ಕುರಿತು ಮತ್ತು ಮುಂದಿನ ವರ್ಷದಲ್ಲಿ ಎಲೆಮರಿಕಾಯಿ ಯಂತೆ ಕೆಲಸ ಕಾರ್ಯ ಮತ್ತು ಸಮಾಜ ಒಳಿತಿಗಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಗೌರವಿಸುವಂತಹ ಕೆಲಸ ಮುಂದಿನ ದಿನಗಳಲ್ಲಿ ಆಗಬೇಕೆಂದರು. ನನ್ನನ್ನು ಕರೆಸಿ ಗೌರವ ಪೂರ್ವಕವಾಗಿಕವಾಗಿ ನನ್ನನ್ನು ಸನ್ಮಾನಿಸಿ ವಿಷ್ಣು ದಾದಾ ರವರ ಇಷ್ಟವಾದ ಹಾಡುಗಳ ಮೂಲಕ ನನ್ನನ್ನು ನಟಿಸಲು ಅವಕಾಶ ಮಾಡಿಕೊಟ್ಟಂತಹ ಎಲ್ಲಾ ಕಲಬುರಗಿ ಜನತೆಗೆ ಧನ್ಯವಾದಗಳು ತಿಳಿಸಿದರು.ಹಾಗೆ ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಮತ್ತು ಉದ್ಘಾಟಕರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿ ಗಣ್ಯರಿಗೂ ವಿಶೇಷವಾಗಿ ಕಾರ್ಯಕ್ರಮದ ಗೌರಧ್ಯಕ್ಷರಾಗಿ ಆಗಮಿಸಿದ ಖ್ಯಾತ ಚಲನಚಿತ್ರ ನಟರು ಆಗಿರತಕಂತ ರಮೇಶ್ ಭಟ್ ಸರ್ ಅವರು ಜೂನಿಯರ್ ವಿಷ್ಣುವರ್ಧನ್ ಅವರಿಗೆ ಕಲ್ಬುರ್ಗಿಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವರಿಗೆ ಕಲಬುರ್ಗಿ ಮಹಾಜನತೆಗೂ ಈ ಸಂದರ್ಭದಲ್ಲಿ ಧನ್ಯವಾದಗಳು ತಿಳಿಸಿದರು.ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕರು ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.