ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಗ್ರಹಪೂರ್ವಕ ಮನವಿಯನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಮಾಡುವುದಾಗಿ ದಸಂಸ ಮುಖಂಡ ಕುಂದೂರು ತಿಮ್ಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎನ್.ರಾಜಣ್ಣ ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರೆ ಅವರು ಎಷ್ಟು ಜನಾನುರಾಗಿಗಳು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅಲ್ಲದೆ ಶೋಷಿತರು, ದಲಿತರ ಪರವಾಗಿ ಕೆಲಸ ಮಾಡುವ ಜಿಲ್ಲೆಯ ರಾಜಕಾರಣಿ ಎಂದರೆ ಕೆ.ಎನ್.ಆರ್,ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.
ಮಧುಗಿರಿ ಕ್ಷೇತ್ರದ ಶಾಸಕರಾಗಿರುವ ಕೆ.ಎನ್.ರಾಜಣ್ಣ,ನೇರ ಮತ್ತು ನಿಷ್ಠೂರ ರಾಜಕಾರಣಿ.ಎಲ್ವ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಅವರಲ್ಲಿದೆ.ಅಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಆಪಾರ ಅನುಭವವನ್ನು ಹೊಂದಿರುವ ಇವರನ್ನು ಮಂತ್ರಿ ಮಾಡುವುದರಿಂದ ಸರಕಾರಕ್ಕೆ ಅನುಕೂಲವಾಗುವುದರ ಜೊತೆಗೆ,ಜಿಲ್ಲೆಯ ಅಭಿವೃದ್ದಿಗೂ ಪೂರಕವಾಗಲಿದೆ ಎಂದು ಕಂದೂರು ತಿಮ್ಮಯ್ಯ ತಿಳಿಸಿದರು.
ದಲಿತರು, ಶೋಷಿತರ ಪರವಾಗಿ ನಿಲ್ಲುವ ರಾಜಕಾರಣಿ ಕೆ.ಎನ್.ರಾಜಣ್ಣ ಅವರನ್ನು ಮಂತ್ರಿ ಮಾಡಬೇಕೆಂದು ಪತ್ರಿಕೆಗಳ ಮೂಲಕ ಇಂದು ಒತ್ತಾಯಿಸಲಾಗುತ್ತಿದೆ.ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಬಳಿ ಸಹ ನಿಯೋಗ ಹೋಗಿ,ಅವರಿಗೂ ಮನವರಿಕೆ ಮಾಡಿಕೊಡಲು ಸಿದ್ದರಿದ್ದೇವೆ.ಕೆ.ಎನ್.ಆರ್.ಮಂತ್ರಿ ಮಾಡುವುದ ರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ.ಹಾಗಾಗಿ ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕೆAದರು.
ವೈದ್ಯ ಡಾ.ಬಸವರಾಜು ಮಾತನಾಡಿ,ದಲಿತರು, ಕಾರ್ಮಿಕರು, ಬಡವರ ಪರವಾಗಿ ದ್ವನಿ ಎತ್ತುವ ಜನಪ್ರತಿನಿಧಿಗಳಲ್ಲಿ ಕೆ.ಎನ್.ಆರ್ ಕೂಡ ಒಬ್ಬರು,ವಿಧಾನಪರಿಷತ್ ಸದಸ್ಯರಾಗಿ,ಶಾಸಕರಾಗಿ,ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ,ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.ಎAತಹ ಸಂದರ್ಭದಲ್ಲಿಯೂ ದಲಿತರು,ಅಲ್ಪಸಂಖ್ಯಾತರ ಪರದ ದ್ವನಿ ಎತ್ತುವ ಎದೆಗಾರಿಕೆ ಕೆ.ಎನ್.ರಾಜಣ್ಣ ಅವರಲ್ಲಿದೆ.ಹಾಗಾಗಿ ಅವರನ್ನು ಸಚಿವರನ್ನಾಗಿ ಮಾಡಿ ಜಿಲ್ಲೆಯ ಅಭಿವೃದ್ದಿಗೆ ಇಂಬು ನೀಡುವಂತೆ ಒತ್ತಾಯಿಸಿದರು.
ಕೆ.ಎನ್.ರಾಜಣ್ಣ ಅವರಿಗೆ ಸಚಸಸಚಿವ ಸ್ಥಾನ ನೀಡಬೇಕೆಂದು
Leave a comment
Leave a comment