ಕೆ .ಎನ್. ರಾಜಣ್ಣ ಅವರು ಸಚಿವರಾದ ಹಿನ್ನೆಲೆಯಲ್ಲಿ ಟೌನ್ ಹಾಲ್ ವೃತ್ತದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವಾಲ್ಮೀಕಿ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷರಾದ ಕುಪ್ಪೂರು ಶ್ರೀಧರ್ ನಾಯಕ್ ಮಾತನಾಡಿದರು. ಧನುಷ್ ಮದಕರಿ, ಮಾರಣ್ಣ ಪಾಳೇಗಾರ್, ಸೋಲಾರ್ ರಾಜಣ್ಣ, ರಾಕೇಶ್, ರಂಜನ್, ರಾಮಯ್ಯ, ಮರಳೂರು ನಾಗರಾಜು, ಹಾಗೂ ಬಂಡೆಕುಮಾರ್ ಹಾಜರಿದ್ದರು.