19ನೇ ಶತಮಾನದ ಉತ್ತರಾರ್ಧದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಜಯದೇವ ಜಗದ್ಗುರುಗಳು 1903 ರಲ್ಲಿ ಚಿತ್ರದುರ್ಗ ಬೃಹನ್ಮಠದ ಅಧ್ಯಕ್ಷರಾಗಿ ಹಲವಾರು ರಾಜಮನೆತನಗಳಿಂದ ಗೌರವಿಸಲ್ಪಟ್ಟು ಇವರು ಸ್ವಾತಂತ್ರ್ಯ ಪೂರ್ವದಲ್ಲಿದ್ದರು. ಉಚಿತ ಹಾಸ್ಟಲ್ಗಳನ್ನು ಸ್ಥಳೀಯರ ಸಹಕಾರದಿಂದ ದೇಶದಾದ್ಯಂತ ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನು ಮಾಡುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿ ಯುಗ ಪ್ರವರ್ತಕರೆನಿಸಿಕೊಂಡಿದ್ದಾರೆ ಎಂದು ಸಂಶೋಧಕರಾದ ಡಾ. ಡಿ.ಎನ್. ಯೋಗೀಶ್ವರಪ್ಪನವರು ನುಡಿದರು. ಅವರು ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಬಸವಕೇಂದ್ರ ಮತ್ತು ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ಏರ್ಪಡಿಸಿದ್ದ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳ 150ನೇ ಜಯಂತ್ಯತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸುತ್ತುಕಟ್ಟು ಸಂಸ್ಕೃತಿಯ ನೇತಾರರಾಗಿದ್ದ ಜಯದೇವ ಜಗದ್ಗುರುಗಳು ನಾಲ್ವಡಿ ಕೃಷ್ಣರಾಜ ಒಡೆಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮಾನವನ ಕಾಯವು ನಶ್ವರ ಆತನ ಕಾರ್ಯಗಳು ಅನಂತ ಎಂದು ಹೇಳುತ್ತಿದ್ದ ಶ್ರೀಗಳೂ ಅವರು ಮಾಡಿದ ಸತ್ಕಾರ್ಯಗಳು ಅವರನ್ನು ಅಮರರನ್ನಾಗಿಸಿವೆ. ಈ ಮೂಲಕ ಇವರು ಇಂದಿನ ಮಠಾಧಿಪತಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಯುಗ ಪ್ರವರ್ತಕ ಜಯದೇವ ಮುರುಘ ರಾಜೇಂದ್ರ ಶ್ರೀಗಳು

Leave a comment
Leave a comment