ಇಂದು ತುಮಕೂರಿನ ಶಾರದಾದೇವಿ ನಗರದಲ್ಲಿರುವ ಜೆ.ಪಿ.ಪ್ರೌಢಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಎನ್.ಆರ್ ಕಾಲೋನಿ ನಾಗರೀಕರ ಹಿತರಕ್ಷಣಾ ಸಮಿತಿವತಿಯಿಂದ ಅಂಬೇಡ್ಕರ್ ನಗರ, ನಿರ್ವಾಣೀ ಲೇಔಟ್ ಎನ್.ಆರ್ .ಕಾಲೋನಿ ಸ್ಲಂಗಳಲ್ಲಿ ದಾಖಲಾತಿ ಆಂದೋಲನ ಜಾಥ ಹಮ್ಮಿಕೊಳ್ಳಲಾಯಿತು.
ದಾಖಲಾತಿ ಆಂದೋಲನ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಪೋಲಿಸ್ ಕಲ್ಪತರು ಪಡೆಯ ಸೌಭಾಗ್ಯಮ್ಮ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಾಲೆ ದಾಖಲಿಸುವಂತೆ ಜೆ.ಪಿ ಪ್ರೌಡಶಾಲೆ ಶಿಕ್ಷಕರು ಮನೆ ಬಾಗಿಲಿಗೆ ಬಂದು ಜಾಗೃತಿ ಆಂದೋಲನ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಯಾಕಂದ್ರೆ ಇತ್ತಿಚಿನ ದಿನಮಾನಗಳಲ್ಲಿ ಅಂದರೆ ಕೋವಿಡ್ ನಂತರ ಪರಿಸ್ಥಿತಿಯಲ್ಲಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದು ಮಾರಣಾಂತಿಕ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ಆದ್ದರಿಂದ ಶಾಲೆ ಪಾಠ ಪ್ರವಚನಗಳಿಗೆ ಹೆಚ್ಚು ಸಮಯ ಕೊಡುವ ರೀತಿ ಗಮನಹರಿಸಿ, ನಿಮ್ಮ ಸುತ್ತ ಮುತ್ತಲಿನಲ್ಲಿ ಯಾವುದೆ ಮಗು ಶಾಲೆಯಿಂದ ಹೊರಗುಳಿದಿದ್ದರೆ ಅವರ ಮಾಹಿತಿ ತಿಳಿಸಿದರೆ ಪೋಷಕರೊಂದಿಗೆ ಅ ಮಗುವನ್ನು ಶಾಲೆಗೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ, ಮಕ್ಕಳ ಮೇಲೆ ಅಥವಾ ಈ ಭಾಗದ ನಾಗರೀಕರ ಮೇಲೆ ಯಾವುದೇ ದೌರ್ಜನ್ಯಗಳಾದಾಗ ಪೋಲಿಸ್ ಸಹಾವಾಣಿ 112 ಮತ್ತು ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಿದರು.
ಸ್ಲಂ ಸಮಿತಿಯ ಕಾಯದರ್ಶಿ ಅರುಣ್ ಮಾತನಾಡಿ ಜೆ.ಪಿ ಪ್ರೌಢಶಾಲೆ ನಮ್ಮ ಈ ಭಾಗದ ದಲಿತ ಸಮುದಾಯದ ಜನರ ಹೇಳಿಗೆಗಾಗಿ ಸುಮಾರು 45 ವಷಗಳಿಂದ ಶ್ರಮಿಸುತ್ತ ಬರುತ್ತಿದೆ. 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಹುದ್ದೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಲೋನಿ ಎಂದಾಕ್ಷಣ ಕೆಲವರ ಕಣ್ಣು ಕೆಂಪಾಗುವ ಮತ್ತು ಕೀಳರಿಮೆಯನ್ನು ಬಿತ್ತುವ ಜನರಿಗೆ ತದ್ವಿರುದ್ದವಾಗಿ ಇಲ್ಲಿಯು ಶಿಕ್ಷಣವಂತರು ಇದ್ದಾರೆ, ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರೇ ಅದಕ್ಕೆ ಮೂಲ ಕಾರಣ ಜೆ.ಪಿ ಪ್ರೌಡಶಾಲೆ ಅಂತಹ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಮತ್ತು ನಮ್ಮ ಆರ್ಥಿಕ ಬದುಕಿನ ಮೇಲಾಗುವ ಪರಿಣಾಮಗಳಿಂದ ದೂರವಿರಬಹುದೆಂದು ಅರುಣ್ ಹೇಳಿದರು.
ಈ ಸಂದರ್ಭದಲ್ಲಿ ಜೆ.ಪಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಪಂಕಜ, ಪಲ್ಲವಿ. ಪೋಲಿಸ್ ಕಲ್ಪತರು ಪಡೆಯ ಸಿಬ್ಬಂಧಿಗಳು ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಅನುಪಮಾ ಮತ್ತು ಎನ್. ಆರ್ ಕಾಲೋನಿಯ ನಾಗರೀಕರು ಪಾಲ್ಗೊಂಡಿದ್ದರು.