ಶಂಕರಚಾರ್ಯರಿಗೂ ಹಾಗೂ ಶಂಕರನಿಗೂ ಯಾವುದೇ ವ್ಯತ್ಯಾಸವಿಲ್ಲ ಶಂಕರಚಾರ್ಯರು ಶಂಕರನ ಅವತಾರವೇ ಆಗಿದ್ದಾರೆ, ಸಮಾಜದಲ್ಲಿ ಇತರರಿಗೆ ಕ್ಷೇಮವನ್ನು ಬಯಸುವುದು ಇತರರಿಗೆ ಕ್ಷೇಮವನ್ನು ಬಯಸುವುದು ಇತರರಿಗೆ ಒಳಿತನ್ನು ಬಯಸುವುದು ಎಲ್ಲರನ್ನೂ ಸಮಾನವಾಗಿ ಕಾಣುವುದು ಇದು ಜಗದ್ಗುರು ಆದಿಶಂಕರರ ತತ್ವ, ಎಲ್ಲರಲ್ಲೂ ದೇವರಿದ್ದಾನೆ ಅಹಂ ಬ್ರಹ್ಮಾಸ್ಮಿ ನಾವೇ ದೇವರು ಎಂಬುದನ್ನು ಪ್ರತಿಪಾದಿಸಿದ ಶಂಕರರು ಸಮಾಜದಲ್ಲಿದ್ದ ನ್ಯೂನ್ಯತೆಗಳನ್ನು ತಮ್ಮ ವಾದದ ಮೂಲಕ ಪರಿಹರಿಸಿ ಸಮಾಜವನ್ನು ಸದ್ಮಾರ್ಗದಲ್ಲಿ ನಡೆಯುವಂತೆ ಮಾಡಿದರು. ಇದಕ್ಕೆ ಇಡೀ ಸಮುದಾಯ ಹಾಗೂ ಸಮಾಜದ ಶಂಕರರಿಗೆ ಕೃತಜ್ಞರಾಗಿರಬೇಕು ಹಾಗೂ ಪರರ ಸಂಪತ್ತು ಪರರ ಧನ ಹಾಗೂ ಪರರಿಗೆ ಅಹಿತವನ್ನು ಬಯಸುವುದೇ ಅಧರ್ಮದ ಕಾರ್ಯ ಸರ್ವೇ ಜನ ಸುಖಿನೋ ಭವಂತು ಎಂದು ಪ್ರತಿಪಾದಿಸುವ ಹಿಂತೂ ಧರ್ಮವೂ ಶ್ರೇಷ್ಠವಾದ ಧರ್ಮವಾಗಿದೆ ಎಂದು ಶೃಂಗೇರಿ ಶ್ರೀ ವಿಧುಶೇಖರ್ ಭಾರತಿ ಮಹಾಸ್ವಾಮಿಗಳು ತಿಳಿಸಿದರು.
ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶಂಕರ ಸೇವಾ ಸಮಿತಿ ಶೃಂಗೇರಿ ಶಂಕರ ಮಠಕ್ಕೆ ಜಗದ್ಗುರುಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲು ಭೇಟಿ ನೀಡಿದ್ದರು ಇತ್ತೀಚಿಗೆ ನಡೆದ ತಮ್ಮ ಭೇಟಿಯ ಸಂದರ್ಭದಲ್ಲಿ ಚಂದ್ರಮೌಳೇಶ್ವರ ಲಿಂಗ ಪ್ರತಿಷ್ಠಾಪನೆ ಹಾಗೂ ಗೋಪುರದ ವಿಮಾನ ಕಲಶ ಸ್ಥಾಪನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಆಶೀರ್ವಚನದಲ್ಲಿ ಮಾತನಾಡಿದ ಗುರುಗಳಾದ ಶ್ರೀವಿಧುಶೇಖರ್ ಭಾರತಿ ಮಹಾಸ್ವಾಮೀಜಿಯವರು ಮಾತನಾಡುತ್ತಾ ಪ್ರತಿಯೊಬ್ಬರೂ ಶಂಕರರನ್ನು ತಿಳಿಯಬೇಕು ಶಂಕರಾಚಾರ್ಯರನ್ನು ಓದಬೇಕು ಅವರ ತತ್ವ ಸಿದ್ದಾಂತ ಜಗತ್ತಿಗೆ ಮಾದರಿಯಾಗಿದೆ ಧರ್ಮವನ್ನು ಸಂರಕ್ಷಿಸುವುದರಲ್ಲಿ ಶಂಕರರ ಕಾರ್ಯ ಶ್ಲಾಘನೀಯವಾದದ್ದು ಈ ಸಂಬoಧ ನಾವೆಲ್ಲರೂ ಶಂಕರಚಾರ್ಯರಿಗೆ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.
ಜಗದ್ಗುರು ಶ್ರೀ ಶ್ರೀ ವಿಧುಶೇಖರ್ ಭಾರತಿ ಮಹಾಸ್ವಾಮಿಗಳು ಶೃಂಗೇರಿ
Leave a comment
Leave a comment