ಸಪ್ತಗಿರಿ ಕಾಲೇಜಿನಲ್ಲಿ ವಿಜೃಂಭಿಸಿದ ಅಂಕುರ-೨೦೨೩
ಬಾಹ್ಯಾಕಾಶ ತಂತ್ರಜ್ಞಾನದಿAದ ಅಗ್ರಸ್ಥಾನದತ್ತ ಭಾರತ – ಡಾ. ಎ. ಎಸ್. ಕಿರಣ್ ಕುಮಾರ್ ಅಭಿಮತ
“ನಮ್ಮ ದೇಶದಲ್ಲಿ ಇಸ್ರೋ ಬಾಹ್ಯಾಕಾಶ ತಂತ್ರಜ್ಞಾನದಿAದ ಕರಾವಳಿ ಮೀನುಗಾರರಿಗೂ ಅನುಕೂಲವಾಗಿದೆ. ಸಂದೇಶ ರವಾನೆ ಮೂಲಕ ಸೈಕ್ಲೋನ್ ನಂತಹ ಹವಾಮಾನ ವೈಪರಿತ್ಯಗಳನ್ನು ಅರಿಯಬಹುದಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ೫ನೇ ಸ್ಥಾನದಿಂದ ಮೊದಲನೇ ಸ್ಥಾನಕ್ಕೇರುವ ಅವಕಾಶ ಕಣ್ಣಮುಂದಿದೆ ಅದನ್ನ ಸಾಧಿಸಲು ಇಂದಿನ ವಿದ್ಯಾರ್ಥಿಗಳು ಶ್ರಮಿಸಬೇಕಾಗಿದೆ”. ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ಎ. ಎಸ್. ಕಿರಣ್ ಕುಮಾರ್ ತಿಳಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಶ್ರಾಂತ ಅಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದ ಬಾಹ್ಯಾಕಾಶ ವಿಭಾಗದ ಸದಸ್ಯರೂ ಆದ ಶ್ರೀಯುತರು ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ “ಅಂಕುರ-೨೦೨೩” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿAದ ಭಾರತದ ಘನತೆ ಹೆಚ್ಚಾಗಿದೆ ಶ್ರೀಮಂತ ರಾಷ್ಟçಗಳ ಉಪಗ್ರಹಗಳನ್ನು ಭಾರತದ ಸ್ವದೇಶಿ ಉಡಾವಣಾ ರಾಕೆಟ್ಗಳಿಂದ ಯಶಸ್ವಿಯಾಗಿ ಕಳಿಸಲು ಸಾಧ್ಯವಾಗಿದೆ. ಸಂವಹನ, ಕೃಷಿ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅದ್ಭುತ ಕೊಡುಗೆಯನ್ನು ಇಸ್ರೋ ನೀಡುತ್ತಿದೆ. ಇಂದು ಆಧುನಿಕ ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿz.ೆ “ವಸುದೈವ ಕುಟುಂಬಕA” ನೀತಿ ಪಾಲನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಪ್ತಗಿರಿ ಸಂಸ್ಥೆ ಶ್ರಮಿಸಲಿ ಎಂದು ಹೇಳಿ ಶುಭ ಹಾರೈಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮೌಲ್ಯಯುತ ಪ್ರಶ್ನೆಗಳಿಗೆ ಉತ್ತರಿಸಿದರು. ಶ್ರೀಯುತರು ಮಾತನಾಡುತ್ತಾ ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಕಾಲೇಜು ಸರ್ವತೋಮುಖ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವುದನ್ನು ಕಂಡು ಪ್ರಶಂಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ವಿಶ್ವಸ್ಥ ಅಧಿಕಾರಿಣಿ ಶ್ರೀಮತಿ ಅರ್ಚನ ಎಸ್ ಕುಮಾರ್ ರವರು ಕಾಲೇಜಿನ ವಿದ್ಯಾರ್ಥಿಗಳ ಸ್ವರ್ಧಾತ್ಮಕ ಸಾಧನೆಯನ್ನು ಅಭಿನಂದಿಸುವುದರ ಜೊತೆಗೆ ಸಂಸ್ಥೆಯ ನಿರಂತರ ಶ್ರಮದ ಪ್ರತಿಫಲವಾಗಿ Iಆಂ ಅಂತರಾಷ್ಟಿçÃಯ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿ ಭಾವುಕರಾದರು. ೨೦೨೨-೨೩ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಶ್ರೇಣಿ ಗಳಿಸಿದ ೧೪೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನ ಸನ್ಮಾನಿಸುವುದರ ಜೊತೆಗೆ ಕನ್ನಡ ಕಣ್ಮಣಿ, ಇಂಗ್ಲೀಷ್ ವರ್ಚುಸೋ, ಹಿಂದಿ ಪುರಸ್ಕೃತ್, ಸಂಸ್ಕೃತ ಶ್ರೀ: ಹೀಗೆ ಭಾಷಾ ಪ್ರಾವೀಣ್ಯ ಪುರಸ್ಕಾರಗಳ ಜೊತೆಗೆ, ವಿಕ್ರಂ ಸಾರಾಬಾಯಿ, ಐನ್ಸ್ಟೆöÊನ್, ಜೇನ್ ಗುಡಾಲ್, ಸಾಗರದಾಚೆಗಿನ ಸಾಧನೆ ಉದಯೋನ್ಮುಕ ಉದ್ಯಮಿ, ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರವೀಣರಾದ ಹಲವು ಇತರೆ ೪೦ ವರ್ಗಗಳಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿAಗ್ ಕ್ಷೇತ್ರಗಳಲ್ಲಿ ಸಾಧನೆಗೈದು ಉದ್ಯೋಗ ಪಡೆದ ವಿದ್ಯಾರ್ಥಿಗಳನ್ನೂ ಸಹ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಎಸ್. ನಿರಂಜನಾರಾಧ್ಯರವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತರಾದ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿ ಚಂದ್ರಯಾನ-೨ರಲ್ಲಿ ಭಾಗಿಯಾಗಿ ಯಶಸ್ವಿಯಾಗಿದ್ದ ಡಾ. ಎ.ಎಸ್. ಕಿರಣ್ ಕುಮಾರ್ ರವರನ್ನು ಪರಿಚಯಿಸುತ್ತಾ ಇವರಿಗೆ ವಿಜ್ಞಾನದ ಹಂಬಲ ಬಾಲ್ಯದಲ್ಲಿಯೇ ಅಂಕುರಿಸಿದ್ದು ಹಂತಹAತವಾಗಿ ಕ್ಷಿಪಣಿ ಮೇಲೇರುವಂತೆ ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನವನ್ನ ಮೈಗೂಡಿಸಿಕೊಂಡು ಹವಾಮಾನ, ಖನಿಜಗಳ ಪತ್ತೆ, ಉಪಗ್ರಹ ಮುಂತಾದ ಕ್ಷೇತ್ರಗಳಲ್ಲಿ ಸಾದನೆಗೈದು ತಂತ್ರಜ್ಞಾನ ಅಭಿವೃದ್ದಿಯಲ್ಲಿ ಇವರು ಅಗ್ರಪಾತ್ರವಹಿಸಿ ೧೦೪ ಉಪಗ್ರಹಗಳನ್ನು ಒಂದೇ ಬಾರಿ ಹಾರಿಸಲು ಸಹಕರಿಸಿದ ಇಂತಹ ಸರಳ ಸಜ್ಜನ ವ್ಯಕ್ತಿ ನಮ್ಮ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನೀಯ ಎಂದು ತಿಳಿಸಿದರು.
ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು ಸಮಾರಂಭದಲ್ಲಿ ಸಪ್ತಗಿರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಎಸ್. ಕುಮಾರ್, ಕಾರ್ಯದರ್ಶಿ ಶ್ರೀಮತಿ ಪದ್ಮರೇಖ, ವಿದ್ಯಾಧಿಕಾರಿ ಶ್ರೀ ಚನ್ನಪ್ಪ ಬಾರಿಗಿಡದ್, ವಿಶ್ವಸ್ಥ ಅಧಿಕಾರಿಣಿ ಶ್ರೀಮತಿ ಅರ್ಚನ ಎಸ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಶ್ರೀ ಮೃಣಾಲ್ ಕುಮಾರ್ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಸಮೀರ್ ಶಿವ ಮತ್ತು ಸುಷ್ಮ ಕಾರ್ಯಕ್ರಮ ನಿರೂಪಿಸಿದರೆ ಅನಘ ಮತ್ತು ಲಿಖಿತ ಪ್ರಾರ್ಥಿಸಿದರು ಕುಮಾರಿ ಲಿಖಿತ ಮತ್ತು ಅಲಿಷಾ ವಂದಿಸಿದರು.