ನಗರದ ಜಯದೇವ ಹಾಸ್ಟಲ್ ಆವರಣದಲ್ಲಿರುವ ಅನನ್ಯ ಇನ್ಸಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಶಾಲಾಶಿಕ್ಷಣ(ಪಿಯು)ಇಲಾಖೆ,ತುಮಕೂರು ಜಿಲ್ಲಾ ವ್ಯವಹಾರ ಅಧ್ಯಯನ ಉಪನ್ಯಾಸಕರ ವೇದಿಕೆ, ಅನನ್ಯ ಇನ್ಸಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಪೋರಂ ವತಿಯಿಂದ ವಾಣಿಜ್ಯಶಾಸ್ತç ಉಪನ್ಯಾಸಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತಿದ್ದ ಅವರು,ಬದಲಾವಣೆಗೆ ಅನುಗುಣವಾಗಿ ಮಕ್ಕಳನ್ನು ತಯಾರುವ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಾನು ಉಪನ್ಯಾಸಕನಾಗಿ ಸೇರಿದ 1993-94ರಲ್ಲಿ ಕಾರ್ಮಸ್ ವಿಭಾಗಕ್ಕೆ ಪ್ರವೇಶ ಪಡೆಯುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇತ್ತು. ಇನ್ನೇನು ಕಾರ್ಮಸ್ ವಿಭಾಗವನ್ನೇ ಮುಚ್ಚಬೇಕು ಎಂಬAತಹ ವಾತಾವರಣ ವಿತ್ತು. ಆದರೆ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರು ಐಟಿ.ಬಿಟಿಗೆ ಉತ್ತೇಜನ ನೀಡಿದ ನಂತರ ಕಾರ್ಮಸ್ಗೆ ಒಳ್ಳೆಯ ಅವಕಾಶಗಳು ಒದಗಿ ಬಂದವು.ಒAದು ಕಾಲದಲ್ಲಿ 10-15 ಉತ್ತರ ಪತ್ರಿಕೆಗಳನ್ನು ಮಾತ್ರ ಮೌಲ್ಯಮಾಪನ ಮಾಡುತ್ತಿದ್ದೇವು. ಇಂದು 3ಲಕ್ಷ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ.ವ್ಯಾಟ್, ಜಿ.ಎಸ್.ಟಿ. ಯಂತಹ ಯೋಜನೆಗಳು ಕಾರ್ಮಸ್ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಹೆಚ್ಚಿಸಿದೆ. ತುಮಕೂರು ವಿಶ್ವವಿದ್ಯಾಲಯ ಒಂದರಲ್ಲಿಯೇ ಸುಮಾರು 17 ಮಾಸ್ಟರ್ ಡಿಗ್ರಿ (ಎಂ.ಕಾA)ಸೆAಟರ್ಗಳಿವೆ.ಹಾಗಾಗಿ ನಮ್ಮ ಮಕ್ಕಳು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಇಂದಿನ ಅಗತ್ಯಕ್ಕೆ ತಕ್ಕಂತೆ ತಯಾರು ಮಾಡಬೇಕಾಗಿದೆ ಎಂದು ಗಂಗಾಧರ್ ನುಡಿದರು.
ಕಂಪ್ಯೂಟರ್ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಪರಿಚಯ
Leave a comment
Leave a comment