ಪ್ರತಿವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ ಈ ದಿನವನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ 21 ಜೂನ್ 2015 ಮೊದಲ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಈ ಹಿನ್ನೆಲೆಯಲ್ಲಿ ಅಫಜಲಪೂ ತಾಲೂಕಿನ ದೇವಲ ಗಾಣಗಾಪೂರದಲ್ಲಿ ಹೇರೂರು ಪ್ರೌಢಶಾಲೆಯ ಮುಖ್ಯ ಗುರುಗಳಾದ ರಾಜಶೇಖರ್ ತಲಾರಿ ನೇತೃತ್ವದಲ್ಲಿ ಶಾಲೆಯ ವಿಶಾಲವಾದ ಮೈದಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಮತ್ತು ಶಾಲಾ ಸಿಬ್ಬಂದಿ ವರ್ಗದವರೊಂದಿಗೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಮಕ್ಕಳೆಲ್ಲರೂ ಬೆಳಗ್ಗೆ 7:00ಗೆ ಶಾಲಾ ಮೈದಾನದಲ್ಲಿ ಹಾಜರಿದ್ದರು ಇನ್ನು ದೈಹಿಕ ಶಿಕ್ಷಕರಾದ ದತ್ತಪ್ಪ ನಡವಿನಕೇರಿ ಯೋಗದ ಕುರಿತು ಯೋಗದಿಂದ ಆಗುವ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ಕಂಟೆಪ್ಪ ಹೇರೂರು ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಗಣೇಶ್ ರಾಠೋಡ್ ಸಹ ಶಿಕ್ಷಕರಾದ ಅಶೋಕ್ ಭೂವಿ, ಶಿವಕುಮಾರ್ ಗೌಳಿ ,ಇಮ್ರಾನ್ ಮನಿಯರ, ಗೀತಾ ಮೋಟೆ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ರಾಜಶೇಖರ್ ಎಸ್ ಮಾತೋಳಿ