ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಿ. ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ದೇಶದಾದ್ಯಂತ ನಡೆದ ಕಟ್ಟಡ ಕಾರ್ಮಿಕ ಚಳುವಳಿಯ ಅಂಗವಾಗಿ ತುಮಕೂರು ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ. ಉಮೇಶ್ ಸರ್ಕಾರದ ಗ್ಯಾರಂಟಿಗಳ ಜೊತೆ ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿ ಸೌಲಭ್ಯಗಳು ನಿರಂತರವಾಗಿ ಸಿಗುವಂತೆ ಕಾರ್ಮಿಕ ಸಚಿವರು ಕ್ರಮಕೈಗೊಳ್ಳಬೇಕು. ಮಂಡಳಿಯು ಹ¯ವಾರು ಗೊಂದಲದ ಸುತ್ತೋಲೆಗಳನ್ನು ಹೊರಡಿಸಿ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ವಂಚಿಸುವುದನ್ನು ತಪ್ಪಿಸಲು ಸುತ್ತೊಲೆಗೆ ಮೊದಲು ಸಾದಕಬಾದಕಗಳ ಬಗ್ಗೆ ರಾಷ್ಟಿçÃಯ ಕಾರ್ಮಿಕ ಸಂಘಟನೆಗಳ ಜೊತೆ ಚರ್ಚಿಸಿ ಜಾರಿಗೆ ತರಬೇಕು. ಇದರಿಂದ ಕಾರ್ಮಿಕರಿಗೆ ಮಾಹಿತಿ ಕೊರತೆಯಾಗಿ ಪುಸ್ತಕಗಳಲ್ಲಿ ಮಾತ್ರ ಸೌಲಬ್ಯಗಳು ಉಳಿಯುತ್ತವೆ.
ಜಿಲ್ಲಾ ಖಜಾಂಚಿ ಇಬ್ರಾಹಿಂ ಖಲೀಲ್ ಪ್ರಸಕ್ತ ಸಾಳಿನ ಶೈಕ್ಷಣಿಕ ವರ್ಷ ಅರ್ಧ ಅವದಿ ಮುಗಿಯುತ್ತಾ ಬಂದರೂ ಕಳೆದ ಸಾಲಿನ ಸೌಲಭ್ಯದ ಹಣವನ್ನು ಪಲಾನುಭವಿಗಳ ಖಾತೆಗೆ ಜಮಾ ಮಾಡದಿರುವುದು ಹಾಗು ಪ್ರಸಕ್ತ ಸಾಲಿಗೆ ಶೈಕ್ಷಣಿಕ ಅರ್ಜಿ ಹಾಕಲು ಅವಕಾಶಕೊಡದಿರುವುದು ಕಾರ್ಮಿಕ ವಿರೋದಿಯಾಗಿದೆ ಆದ್ದರಿಂದ ತಕ್ಷಣ ಮಂಡಳಿಯು ಕಾರ್ಮಿಕರಿಗೆ ಅವಕಾಶ ನಿಡಬೇಕೆಂದರು.
ಗುಬ್ಬಿ ತಾಲ್ಲೂಕು ಮುಖಂಡ ಶಿವಣ್ಣ ಕಾರ್ಮಿಕರ ಹೆಸರಲ್ಲಿ ಲೂಟಿ ನಿಲ್ಲಬೇಕು ನಕಲಿ ಕಾರ್ಡಗಳನ್ನು ರದ್ದುಮಾಡಿ ನಿಜವಾದ ಕಾರ್ಮಿಕರಿಗೆ ಅಲೆದಾಟ ತಪ್ಪಿಸಬೇಕು. ಗೌರವಾಧ್ಯಕ್ಷ ಗೋವಿಂದರಾಜು ಮಾತನಾಡಿ ಬಾಕಿ ನಿಂತಿರುವ ಪಿಂಚಿಣಿ, ಮದುವೆ ಮುತಾಂದ ಸೌಲಭ್ಯಗಳ ಹಣ ವಿಳಂಬಮಾಡದೆ ಬಿಡುಗಡೆಮಾಡಬೇಕು.
ಈ ಸಂದರ್ಭದಲ್ಲಿ ಕಾರ್ಮಿಕರ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವಾಷರತ್ತುಗಳು) ಕಾಯ್ದೆ–೧೯೯೬ ಮತ್ತು ಸೆಸ್ ಕಾಯ್ದೆ–೧೯೯೬ ಕಾಯ್ದೆ ಹಾಗೂ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ ೧೯೭೯ ಕಾಯ್ದೆಯನ್ನು ಬಲಪಡಿಸಬೇಕು. ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ನೋಟು ಅಮಾನ್ಯೀಕರಣ, ಜಿ.ಎಸ್.ಟಿ. ನೀತಿಗಳು ಜಾರಿಯಾದ ಬಳಿಕ ಹಾಗೂ ಕೋವಿಡ್ ನಂತರದಲ್ಲೂ ಸಾಕಷ್ಟು ಅಭದ್ರತೆಯ ಜೀವನ ನಡೆಸುತ್ತಿದ್ದಾರೆ. ನೊಂದಣೆ/ನವೀಕರಣಕ್ಕೆ, ವೇತನ ಚೀಟಿ, ಹಾಜರಾತಿ ಕಡ್ಡಾಯ ಆದೇಶ ರದ್ದುಮಾಡಬೇಕೇಂದು ಒತ್ತಾಯಿಸಲಾಯಿತು.
ನ ಚಳುವಳಿಯ ನೇತೃತ್ವವನ್ನು ಬೆಟ್ಟಪ್ಪ, ಅಶ್ವತ್ಥಪ್ಪ, ಕೊಂಡಪ್ಪ, ರಾಮಾಂಜಿ, ಮಮತ, ಕೆಂಪರಾಜು, ಕಾಂತರಾಜು, ವೆಂಕಟೇಶ್, ರವೀಶ್, ಚಿಕ್ಕಣ್ನ, ಪ್ರಕಾಶ್, ಸೀಗಯ್ಯ, ನಂಜAಡಪ್ಪ, ವಸಂತಕುಮಾರ್, ಚನ್ನಕೇಶವ,ಬೆಳ್ಳಿಕೃಷ್ಣಪ್ಪ ಮಲ್ಲೇಶ್, ಸಿದ್ದರಾಮಯ್ಯ, ರವೀಶ್ ಊರುಕೆರೆ. ತಿಮ್ಮಕ್ಕ, ತಮ್ಮಗ್ಯಾರಂಟಿಗಳ ಜೊತೆ ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿ ಸೌಲಭ್ಯಗಳ ಬಾಗ್ಯಕ್ಕೆ ಒತ್ತಾಯಯ್ಯ ಮಾಗಡರಂಗಾಚಾರ್ ಮುಂತಾದವರು ವಹಿಸಿದ್ದರು.
ಹಕ್ಕೊತ್ತಾಯದ ಮನವಿಯನ್ನು ಕಾರ್ಮಿಕ ಸಚಿವರಿಗೆ ಕಾರ್ಮಿಕ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಮಿಕ ನಿರೀಕ್ಷಕರಾದ ವೆಂಕಟೇಶ್ ಬಾಬು ಮೂಲಕ ಸಲ್ಲಿಸಲಾಯಿತು..