ತುಮಕೂರು: ಸಂಶೋಧನೆಗಳಿAದಾಗುವ ಆವಿಷ್ಕಾರಗಳೂ ಅಭಿವೃದ್ಧಿಯ ಸಂಕೇತ. ಇಂತಹ ಪ್ರವೃತ್ತಿಗಳಿಗೆ ಆಯಸ್ಸು ಜಾಸ್ತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಜೀವ ರಸಾಯನಶಾಸ್ತç ವಿಭಾಗ, ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ವಿಭಾಗ, ಜೈವಿಕತಂತ್ರಜ್ಞಾನ ಮತ್ತು ಸೂಕ್ಷö್ಮ ಜೀವವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳು ಮಂಗಳವಾರ ಆಯೋಜಿಸಿದ್ದ ‘ಆರೋಗ್ಯ, ಪೋಷಣೆ, ಆಹಾರ ಮತ್ತು ಬೆಳೆ ಭದ್ರತೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಆವಿಷ್ಕಾರಗಳು’ ಕುರಿತ ರಾಷ್ಟಿçÃಯ ಸಮ್ಮೇಳನ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ದಿವಂಗತ ಡಾ. ಟಿ. ಜಿ. ತಿಪ್ಪೇಸ್ವಾಮಿ ಅವರ ಸ್ಮರಣಾರ್ಥ ‘ಔಷಧ ಅನ್ವೇಷಣೆಗಾಗಿ ಕ್ರೊಮ್ಯಾಟೋಗ್ರಫಿಯಲ್ಲಿನ ಪ್ರಗತಿ’ ಕುರಿತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮನುಷ್ಯರು ಸಂಪತ್ತಿಗೆ ಕೊಡುವ ಪ್ರಾಮುಖ್ಯತೆ ನಮ್ಮ ನಡತೆ, ಆರೋಗ್ಯಕ್ಕೆ ಕೊಡುತ್ತಿಲ್ಲ. ಸಂಪತ್ತು ಕಳೆದುಕೊಂಡರೆ ಏನೂ ಆಗುವುದಿಲ್ಲ. ಆರೋಗ್ಯ ಕಳೆದುಕೊಂಡರೆ ನಮ್ಮ ದೇಹದ ಶಕ್ತಿ ಕಡಿಮೆಯಾಗುತ್ತದೆ. ಆದರೆ ನಮ್ಮ ನಡತೆ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡAತೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್. ಕೆ ಸೈದಾಪುರ ಮಾತನಾಡಿ, ಶಾಲಾ ಕಾಲೇಜುಗಳಿಂದ ಪಡೆಯುವ ಶಿಕ್ಷಣಕ್ಕಿಂತ ನಮ್ಮ ಸ್ವಂತ ಅನುಭವಗಳು ಸಾಕಷ್ಟು ಶಿಕ್ಷಣ ನೀಡುತ್ತವೆ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆಗಳಿಲ್ಲದೆ ಅಭಿವೃದ್ಧಿ ಆಗುವುದಿಲ್ಲ. ಸಂಶೋಧನೆ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತದೆ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಆವಿಷ್ಕಾರಗಳೂ ಅಭಿವೃದ್ಧಿಯ ಸಂಕೇತ
Leave a comment
Leave a comment