ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರಗಳಿಗೆ ಬಂಜಾರ ಸಮುದಾಯದವರಿಗೆ ಟಿಕೆಟ್ ನೀಡದೆ ಕಡೆಗಣಿಸಿರುವುದು ಖಂಡನಿಯ ಎಂದು ತಿಪ್ಪೇಸ್ವಾಮಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹಲವು ಲೋಕಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿದ್ದರೂ ಕೂಡ ಬಂಜಾರ ಸಮುದಾಯದವರಿಗೆ ಈ ಭಾರಿ ಲೋಕಸಭಾ ಟಿಕೆಟ್ ನೀಡದಿರುವುದು ಶೋಚನೀಯ ಸಂಗತಿ ಎಂದರು. ಈ ಕಾಂಗ್ರೆಸ್ ಸರ್ಕಾರ ಬಂಜಾರ ಸಮುದಾಯವನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಕಡೆಗಣಿಸುತ್ತಿರುವುದು ನಮ್ಮ ಇಡೀ ಸಮಾಜಕ್ಕೆ ತಿಳಿದಿದೆ. ಈ ಸಮಾಜಕ್ಕೆ ಸಚಿವ ಸ್ಥಾನವನ್ನು ಸಹ ರಾಜ್ಯ ಸರ್ಕಾರ ನೀಡಿಲ್ಲ ಸೂಕ್ತ ರಾಜಕೀಯ ಸ್ಥಾನಮಾನವನ್ನು ನೀಡಿದೆ ಕಡೆಗಣಿಸುತ್ತಿರುವುದು ನಮಗೆ ಬೇಸರ ತಂದಿದೆ ಎಂದರಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು, ರಾಜ್ಯ ಕಾಂಗ್ರೆಸ್ ಈ ಶೋಷಿತ ಅಸಂಘಟಿತ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದ ಬಂಜಾರ ಸಮಾಜದ ಬಗ್ಗೆ ಸ್ವಲ್ಪ ಕರುಣೆ ಇಲ್ಲದಿರುವುದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಕಾಂಗ್ರೆಸ್ ಶಾಸಕರು ಬಂಜಾರ ಸಮಾಜದ ನೂರಕ್ಕೆ ನೂರರಷ್ಟು ಮತ ಪಡೆದು ಈ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದ್ದಾರೆ, ಆದರೆ ಈ ಕಾಂಗ್ರೆಸ್ ಸರ್ಕಾರ ಈ ಸಮಾಜವನ್ನು ಮರೆತಂತೆ ಕಾಣುತ್ತಿದೆ ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ಬಂಜಾರ ಜಾಗೃತಿದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್) ಹೇಳಿದ್ದಾರೆ.