ಪತ್ರಿಕೆಗಳ ಮುಖ್ಯ ಸ್ಥಾನಗಳಲ್ಲಿ ಇರಬೇಕಾಗಿದೆ ಎಂದರು.
ಇAದು ಸತ್ಯ ಹೇಳುವುದು ಕಷ್ಟವಾಗಿದೆ.ಸತ್ಯ ಹೇಳಿದರೆ ಯುಎಪಿಎ ಎಂಬ ಕಾನೂನಿನ ಅಡಿ ದೇಶದ್ರೋಹದ ಪಟ್ಟ ಹೊತ್ತು, ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ.ಕಳೆದ ಎಂಟು ವರ್ಷಗಳಲ್ಲಿ ಸುಮಾರು ೯೧ ಪತ್ರಕರ್ತರ ಕೊಲೆ ನಡೆದಿದೆ.೧೯ಕ್ಕೂ ಹೆಚ್ಚು ಪತ್ರಕರ್ತರು ಯುಎಪಿಎ ಅಡಿಯಲ್ಲಿ ಜೈಲಿನಲ್ಲಿದ್ದಾರೆ.ಸಂವಿಧಾನವನ್ನು ಬದಲಾಯಿಸುವ ಪ್ರಕ್ರಿಯೆ ನ್ಯಾಯಾಲಯಗಳ ಮೂಲಕ ನಡೆಯುತ್ತಿದೆ.ನೈಜ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ.ಪ್ರಜಾಪ್ರಭುತ್ವ ಆಧಾರ ಸ್ತಂಬವಾಗಿರುವ ಪತ್ರಕರ್ತರ ರಕ್ಷಣೆಗೆ ಕಾನೂನಿನ ಅಗತ್ಯವಿದೆ.ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗುವAತೆ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಿದರು.
ಇಂದು ದಕ್ಷ ಮತ್ತು ಪ್ರಾಮಾಣಿಕ ವಕೀಲರು ನ್ಯಾಯಾಧೀಶರಾಗಲು ಹಿಂಜರಿಯುವAತಹ ಕಾಲ ಸೃಷ್ಟಿಯಾಗಿದೆ.ಆಳುವ ಸರಕಾರಗಳು ತಮ್ಮ ಮೂಗಿನ ನೇರಕ್ಕೆ,ತಮ್ಮ ಅಜೆಂಡಾ ಒಪ್ಪಿ,ಆ ಪ್ರಕಾರ ತೀರ್ಪು ನೀಡುವಂತಹ ನ್ಯಾಯಾಧೀಶರನ್ನು ಬಯಸುತಿದ್ದು,ಕೊಲಜಿಯಂ ಶಿಫಾರಸ್ಸು ಮಾಡಿದರೂ ಕೆಲವು ಫೈಲ್ಗಳು ವರ್ಷ ಕಳೆದರೂ ಜಾರಿಗೆ ಬಾರದ ಕಾರಣ ನ್ಯಾಯಾಧೀಶರಾಗಲು ಕೆಲವರು ಹಿಂಜರಿಯುತ್ತಿದ್ದಾರೆ.ಇದು ಅಪಾಯದ ಸಂಕೇತ ಎಂದು ಪ್ರೊ.ರವಿವರ್ಮಕುಮಾರ್ ತಿಳಿಸಿದರು.
ಬೆವರಹನಿ ಪತ್ರಿಕೆಯ ಸಂಪಾದಕ ಕುಚ್ಚಂಗಿ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ಪಕ್ಷವೇ ಇಂದು ಅಧಿಕಾರದಲ್ಲಿದ್ದರೂ, ಜನತೆಯ ಮೇಲೆ ಪರೋಕ್ಷ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ.ಇಸ್ರೇಲ್ ಮತ್ತು ಪಾಲಸ್ತೆöÊನ್ ಯುದ್ದ ಕೊನೆಗಾಣಬೇಕು, ಜೀವ ಹಾನಿ ನಿಲ್ಲಬೇಕೆಂದು ಪ್ರತಿಭಟನೆ ನಡೆಸಿದ ಪ್ರಗತಿಪರರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಾಗಿದೆ.ಸರಕಾರಗಳು ಬದಲಾಗುವುದು ಮುಖ್ಯವಲ್ಲ. ಆಡಳಿತದಲ್ಲಿ ಬದಲಾವಣೆ ಕಾಣಬೇಕು.ಇಂದು ರೈತ ಮತ್ತು ಪತ್ರಿಕೋದ್ಯಮಿ ಮಾತ್ರ ತಮ್ಮ ಉತ್ಪನ್ನಗಳ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಇದು ಬದಲಾವಣೆ ಕಾಣಬೇಕಿದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ,ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ,ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಮೂರ್ತಿ ಮಾತನಾಡಿದರು.ವೇದಿಕೆಯಲ್ಲಿ ಚಿಂತಕ ಕೆ.ದೊರೈರಾಜು,ಸಿಐಟಿಯುನ ಬಿ.ಉಮೇಶ್,ಐಎಂಎ ಅಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ,ಸೈಯದ್ ಮುಜೀಬ್, ಜನಸಂಗ್ರಾಮ ಪರಿಷತ್ ಅಧ್ಯಕ್ಷ ಪಂಡಿತ್ ಜವಹರ್, ಶಿರಾ ಕಾಂಗ್ರೆಸ್ ಮುಖಂಡ ರೂಪೇಶ ಎಸ್.ಎನ್.ಕೃಷ್ಣಯ್ಯ, ಎಸ್ಯುಸಿಐನ ಎಸ್.ಎನ್.ಸ್ವಾಮಿ, ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಜಲತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಪರಿಸರ, ಕೃಷಿ ಗೀತೆಗಳನ್ನು ಹಾಡಿದರು. ಜಿ.ಎನ್.ರಾಧಾಕೃಷ್ಣ ನಿರೂಪಿಸಿದರು.
ಅಸಮಾನತೆ ಎಲ್ಲೆಡೆ ಕಾಣುತಿದ್ದು, ಇದು ತೊಲಗದಿದ್ದರೆ ಜನರು ದಂಗೆ ಏಳುವ ಸಾಧ್ಯತೆ

Leave a comment
Leave a comment